ಮಂಗಳೂರು: ಮಂಗಳೂರು ಪೂರ್ವ ಪೋಲೀಸ್ ಠಾಣೆ ವತಿಯಿಂದ ಕದ್ರಿ ಹಿಲ್ಸ್ ಸರ್ಕಾರಿ ಐ.ಟಿ.ಐ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಶುಕ್ರವಾರ ಆಯೋಜಿಸಲಾಯಿತು.

ಪೋಲೀಸ್ ಠಾಣೆ ಪಿ.ಎಸ್.ಐ ಪ್ರತಿಭಾ ಮಾತನಾಡಿ, ಮಾದಕ ಮುಕ್ತ ಸಮಾಜ ನಮ್ಮೆಲ್ಲರ ದಿವ್ಯ ಸಂಕಲ್ಪ ಆಗಬೇಕು ಮತ್ತು ಸಮಾಜದಲ್ಲಿ ಇದರ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಸಂಸ್ಥೆಯ ಪ್ರಾಚಾರ್ಯ ಸತೀಶ ಎ.ಎಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾದಕ ವಸ್ತುಗಳ ಸೇವನೆ ಮಾಡುವ ವ್ಯಕ್ತಿಯು ಸ್ವ ಇಚ್ಚೆಯಿಂದ ನಿರ್ಧಾರ ಕೈಗೊಂಡು ವ್ಯಸನ ಮುಕ್ತನಾಗಬೇಕು ಎಂದರು.
ಡಬ್ಲ್ಯು.ಹೆಚ್.ಸಿ ಚಂದ್ರಲೇಖ, ಉಪ ಪ್ರಾಚಾರ್ಯ ರಮೇಶ್ ನಾಯ್ಕ್ ಹಾಗೂ ಆಡಳಿತಾಧಿಕಾರಿ ಪ್ರತಿಮಾ ಎಂ, ಪ್ರಭಾರೆ ತರಬೇತಿ ಅಧಿಕಾರಿ ಅಲೆಕ್ಸಾಂಡರ್ ಸಿ ಜೆ, ಸ್ವರ್ಣಗೌರಿ, ರವಿ ಕೆ ಹಾಗೂ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ನಂದನ್, ಕಾರ್ಯದರ್ಶಿ ಶ್ರೀಜನ್, ಕ್ರೀಡಾ ಕಾರ್ಯದರ್ಶಿ ನೂತನ್, ಸಾಂಸ್ಕೃತಿಕ ಕಾರ್ಯದರ್ಶಿ ಅಕ್ಷಯ್ ಉಪಸ್ಥಿತರಿದ್ದರು.
ಕಿರಿಯ ತರಬೇತಿ ಅಧಿಕಾರಿ ಪುರುಷೋತ್ತಮ ಎಲ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
