ಕರಂಗಲ್ಪಾಡಿ: ಯುವ ವಕೀಲ ಶೆಲ್ಡನ್ ಹರ್ಮನ್ ತಾವ್ರೊ ಕಛೇರಿ ಆಶೀರ್ವಚನ

ಕರಂಗಲ್ಪಾಡಿ: ವಕೀಲ ವೃತ್ತಿ ಆರಂಭಿಸಿ ಯಶಸ್ಸು ಕಂಡ ಯುವ ವಕೀಲ ಶೆಲ್ಡನ್ ಹರ್ಮನ್ ತಾವ್ರೊ ತಮ್ಮ ಸ್ವಂತ ಕಛೇರಿಯನ್ನು ಕರಂಗಲ್ಪಾಡಿಯಲ್ಲಿ ಇಂದು ಆರಂಭಿಸಿದರು.

ಆಶೀರ್ವಚನವನ್ನು ಫಾ. ಲಾರೆನ್ಸ್ ‌ಕುತಿನ್ನೊ ಮಾಡಿ ಶುಭಹಾರೈಸಿದರು.

ದೀಪ ಬೆಳಗಿಸಿ ಮಾತನಾಡಿ ಹಿರಿಯ ವಕೀಲ ಮತ್ತು ಶೆಲ್ಡನ್ ತರಬೇತಿ ಮಾಡಿದ ವಕೀಲರಾದ ವಸಂತ ಅಡ್ಯಂತಾಯ ಶುಭ ಹಾರೈಸಿದರು.

ವಿಶ್ವಕರ್ಮ ಮುಖಂಡ ಹರೀಶ್ ಆಚಾರ್ಯ ,ಶೆಲ್ಡನ್ ತಂದೆ ರಾಜ್ಯ ಶಿಕ್ಷಕ ಸಂಘದ ಮಾಜಿ ಉಪಾಧ್ಯಕ್ಷ ಸ್ಟೇನಿ ತಾವ್ರೊ ಮತ್ತು ಹಿರಿಯ ಶಿಕ್ಷಕಿ ತಾಯಿ ಹಿಲ್ಡ ಸಿ ತಾವ್ರೊ, ಹಿರಿಯ ಪತ್ರಕರ್ತ ರೇಮಂಡ್ ಡಿಕೂನಾ ತಾಕೊಡೆ, ಜೋನ್ ತಾವ್ರೊ, ರೊಬರ್ಟ್ ಸಿರಿಲ್ ಡಿಸೋಜ ಮುಂತಾದವರು ಉಪಸ್ಥಿತಿ ಇದ್ದು ಶುಭಾಶಯ ಕೋರಿದರು.

Leave a Reply

Your email address will not be published. Required fields are marked *