ಮೂಡುಬಿದಿರೆ: ಕಂಪನಿಯ ಸಿ ಎಸ್ ಆರ್ ನಿಧಿಯಿಂದ ಬಿ ಆರ್ ಪಿ ಶಾಲೆಗೆ ಕೊಡುಗೆಗಳು

ವರದಿ ರಾಯಿ ರಾಜಕುಮಾರ
ಬೆಂಗಳೂರಿನ ಟೆಕ್ನಾಲಜಿ ಇಂಡಿಯಾ ಆಯಿಲ್ ಮತ್ತು ಫ್ಯಾಟ್ಸ್ ಪ್ರೈವೇಟ್ ಲಿಮಿಟೆಡ್ ಅವರ ಸಿ ಎಸ್ ಆರ್ ನಿಧಿಯಿಂದ ಸುಮಾರು ಐದು ಲಕ್ಷದಷ್ಟು ಧನದ ಕೊಡುಗೆಯನ್ನು ವಿವಿಧ ವಸ್ತುಗಳ ರೂಪದಲ್ಲಿ ಮೂಡುಬಿದಿರೆ ಬಾಬು ರಾಜೇಂದ್ರ ಪ್ರೌಢಶಾಲೆಗೆ ಮುಳಿಯ ರಘುರಾಮ ಅವರು ನೀಡಿರುತ್ತಾರೆ. ನೀಡಿದ ಎಲ್ಲಾ ವಸ್ತುಗಳ ಲೋಕಾರ್ಪಣೆ ಮಾರ್ಚ್ 13ರಂದು ಬಿ ಆರ್ ಪಿ ಪ್ರೌಢಶಾಲೆಯಲ್ಲಿ ನಡೆದಿರುತ್ತದೆ.

ಸಿ ಎಸ್ ಆರ್ ನಿಧಿಯಿಂದ ಕೊಡ ಮಾಡಿದ ಜನರೇಟರ್, ಎರಡು ಆನ್ಲೈನ್ ವಿದ್ಯಾ ಸಂಬಂಧಿ ಟಿವಿ, ಪ್ರೊಜೆಕ್ಟರ್ಗಳು, ಲ್ಯಾಪ್ಟಾಪ್ಗಳು, ಪ್ರಿಂಟರ್, ಇತ್ಯಾದಿಗಳ ಕೀಲಿ ಕೈಯನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಭಯ ಚಂದ್ರ ಜೈನ್, ಶಾಲಾ ಸಂಚಾಲಕ ರಾಮನಾಥ ಭಟ್ ಇವರುಗಳಿಗೆ ಹಸ್ತಾಂತರಿಸಿ ಮಾತನಾಡಿದ ಮುಳಿಯ ರಘುರಾಮ ಅವರು ಮುಂದೆ ಕಂಪನಿಯಿಂದ ಶಾಲೆಗೆ ಬೇಕಾಗುವ ಇತರ ಸೌಲಭ್ಯಗಳನ್ನು ಕೂಡ ಮಾಡಿಕೊಡುವ ಭರವಸೆಯನ್ನು ನೀಡಿ ಶಾಲೆಗೆ ಶುಭ ಹಾರೈಸಿದರು.

ಈ ಅಪೂರ್ವ ಕೊಡುಗೆಗೆ ಮುಖ್ಯ ಕಾರಣಕರ್ತರಾದ ಮೂಡಬಿದ್ರೆ ಯೋಗೇಶ್ ನಾಯಕ್ ಹಾಗೂ ಗೋವರ್ಧನ್, ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ಮುಖ್ಯ ಶಿಕ್ಷಕಿ ತೆರೆಸಾ ಕರ್ಡೋಜಾ, ಹಾಜರಿದ್ದರು. ವೆಂಕಟರಮಣ ಕೆರೆಗದ್ದೆ ಕಾರ್ಯಕ್ರಮ ನಿರ್ವಹಿಸಿದರು. ಕಿರಣ್ ಕುಮಾರ್ ಕಾರ್ಯಕ್ರಮ ಸಂಘಟಿಸಿದ್ದರು.

Leave a Reply

Your email address will not be published. Required fields are marked *