ರಾಜ್ಯ ಮಟ್ಟದ ಆರ್ಮ್ ರೆಸ್ಲಿಂಗ್‌ನಲ್ಲಿ ಕಾರ್ಕಳ ಫ್ರೆಂಡ್ಸ್ ಪವರ್ ಜಿಮ್ ಕ್ರೀಡಾಪಟುಗಳ ಅದ್ಭುತ ಸಾಧನೆ

ಕಾರ್ಕಳ: ಮಂಗಳೂರಿನ ಪುರಭವನದಲ್ಲಿ ಜರುಗಿದ ರಾಜ್ಯ ಮಟ್ಟದ ಆರ್ಮ್ ರಸ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಕಾರ್ಕಳ ಜೋಡುರಸ್ತೆಯ ಫ್ರೆಂಡ್ಸ್‌ ಪವರ್ ಜಿಮ್ ನ ಸುಜಿತ್ ನಾಯಕ್ ಸೀನಿಯರ್ ವಿಭಾಗದಲ್ಲಿ 2 ಚಿನ್ನ, ಯೂತ್ ವಿಭಾಗದಲ್ಲಿ ಸಮರ್ಥ್ 1 ಬೆಳ್ಳಿ, ಜೂನಿಯರ್ ವಿಭಾಗದಲ್ಲಿ ವಿನೋದ್ ಹಾಗೂ ಧನುಷ್ ತಲಾ 1 ಚಿನ್ನ, ಶ್ರೀನಾಥನ್ ಶೆಟ್ಟಿ 2 ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಲೇಡೀಸ್ ಫಿಟ್ ನೆಸ್ ಜಿಮ್ ನ ವಂಶ ಜೈನ್ 2 ಚಿನ್ನ ಹಾಗೂ 1 ಬೆಳ್ಳಿ, ನಿಧಿ ಪೂಜಾರಿ 2 ಚಿನ್ನ ಹಾಗೂ 1 ಬೆಳ್ಳಿ ಪದಕಗಳನ್ನು ಗೆದ್ದು ಮೇ 29 ರಿಂದ ಗುಜರಾತ್ ನ ಗಾಂಧಿನಗರದಲ್ಲಿ ಜರಗುವ ರಾಷ್ಟ್ರಮಟ್ಟದ ಆರ್ಮ್ ರೆಸ್ಲಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇವರಿಗೆ ಫ್ರೆಂಡ್ಸ್‌‌ಪವರ್ ಜಿಮ್ ನ ಮಹಮ್ಮದ್ ಅಲಿಯವರು ತರಬೇತಿ ನೀಡಿರುತ್ತಾರೆ. ಅವರಿಗೆ ಜಿಮ್ ನ ಸಹಪಾಲುದಾರರಾದ ಯೋಗೀಶ್ ಸಾಲ್ಯಾನ್ ರವರು ಶುಭ‌ ಕೋರಿರುತ್ತಾರೆ.

Leave a Reply

Your email address will not be published. Required fields are marked *