ಕಾರ್ಕಳ: ಸರ್ಕ್ಯೂಟ್ರಿಕ್ಸ್ ಸ್ಪರ್ಧೆಯಲ್ಲಿ ನಿಟ್ಟೆ ವಿದ್ಯಾರ್ಥಿಗಳಿಗೆ ದ್ವಿತೀಯ ಸ್ಥಾನ

ಕಾರ್ಕಳ: ಎಸ್ಡಿಎಂ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಲ್ಲಿ ಇತ್ತೀಚೆಗೆ ನಡೆದ ‘ಸೃಷ್ಟಿ ಇನ್ನೋವೇಶನ್ ಎಕ್ಸ್ಚೇಂಜ್ 2026 ರ ಸಮಯದಲ್ಲಿ ನಡೆದ ರಾಜ್ಯ ಮಟ್ಟದ “ಸರ್ಕ್ಯೂಟ್ರಿಕ್ಸ್ – ಸರ್ಕ್ಯೂಟ್ ಡಿಸೈನ್ ಮತ್ತು ಡೀಬಗ್ಗಿಂಗ್” ಸ್ಪರ್ಧೆಯಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ನಾಲ್ಕನೇ ಸೆಮಿಸ್ಟರ್ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ (ಇಸಿಇ) ವಿದ್ಯಾರ್ಥಿಗಳಾದ ಧನುಷ್ ಎಸ್ ಪೂಜಾರಿ ಮತ್ತು ಆಕಾಶ್ ಶೆಟ್ಟಿ ರನ್ನರ್-ಅಪ್ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಈ ಸ್ಪರ್ಧೆಯಲ್ಲಿ ರಾಜ್ಯದಾದ್ಯಂತದ ವಿವಿಧ ಎಂಜಿನಿಯರಿಂಗ್ ಸಂಸ್ಥೆಗಳನ್ನು ಪ್ರತಿನಿಧಿಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸರ್ಕ್ಯೂಟ್ ವಿನ್ಯಾಸ, ಟ್ರಬಲ್ ಶೂಟಿಂಗ್ ಮತ್ತು ಡೀಬಗ್ಗಿಂಗ್ ನಲ್ಲಿ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಿದರು.

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಮತ್ತು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವೆ ಆಗಿರುವ ಶೋಭಾ ಕರಂದ್ಲಾಜೆ ಅವರು ಬಹುಮಾನಗಳನ್ನು ವಿತರಿಸಿದರು.

Leave a Reply

Your email address will not be published. Required fields are marked *