ಲೋಬೊ ಪ್ರೊಡಕ್ಷನ್ ಅನಾವರಣ-`ವೇಳ್ ಘಡಿ’ ಕೊಂಕಣಿ ಸಿನೆಮಾದ ಪೋಸ್ಟರ್ ರಿಲೀಸ್

ಮುಂಬಯಿ: ಕೊಂಕಣಿ ಅಂತಹ ಪ್ರಾದೇಶಿಕ ಚಲನಚಿತ್ರಗಳು ಮುಂಚೂಣಿಯತ್ತ ಸಾಗುತ್ತಿದೆ. ಸದ್ಯ ಕೊಂಕಣಿ ಸಿನೆಮಾಗಳು ಅದೃಷ್ಟದಾಯಕವಾಗಿವೆ. ಮಾತೃಭಾಷಿಗರು ಪ್ರೊತ್ಸಾಹಿಸಿ ಬಲತುಂಬಿದಾಗ ಇನ್ನಷ್ಟು ಹಲವಾರು ಕೊಂಕಣಿ ಸಿನೆಮಾಗಳು ತೆರೆಕಾಣಲು ಸಾಧ್ಯವಾಗಲಿದೆ. ಸ್ವಭಾಷಿಗರು ಸಿನೆಮಾ ಮಂದಿರಗಳಲ್ಲಿ ವೀಕ್ಷಿಸಿದಾಗಲೇ ಸಿನೆಮಾಗಳು ಯಶಸ್ವಿ ಪ್ರದರ್ಶನಗಳನ್ನೀಡಲು ಸಾಧ್ಯ. ಸುಮಾರು ನಾಲ್ಕುವರೆ ದಶಗಳ ಹಿಂದೆ ನಾನೂ ನನ್ನ ಮಾತೃಭಾಷೆ ಕೊಂಕಣಿಯ ಸಿನೆಮಾ ಸಿದ್ಧಪಡಿಸಬೇಕಿತ್ತು. ಮುಂದಿನ ಅವಕಾಶದ ಬಗ್ಗೆ ಆಸಕ್ತನಾಗಿರುವೆ ಎಂದು ಬಾಲಿವುಡ್‍ನ ಸಾಜನ್ ನಾಮಾಂಕಿತ ಚಿತ್ರ ನಿರ್ದೇಶಕ-ನಿರ್ಮಾಪಕ ಲಾರೇನ್ಸ್ ಬಿ.ಡಿ’ಸೋಜಾ ತಿಳಿಸಿದರು.

ಕಳೆದ ಶನಿವಾರ ಸಂಜೆ ಅಂಧೇರಿ ಪೂರ್ವದ ಸಾಕಿನಾಕದಲ್ಲಿನ ಶುಕ್ರಾನ್ ಲಾಂಜ್ ಬ್ಯಾಂಕ್ವೆಟ್‍ನಲ್ಲಿ ರಚಿತ ಸ್ವರ್ಗೀಯ ಸಂಗೀತ ಸಾಮ್ರಾಟ್' ಹೆನ್ರಿ ಡಿ'ಸೋಜಾ ವೇದಿಕೆಯಲ್ಲಿ ವಿಶ್ವ ಪ್ರಸಿದ್ಧ ಕೊಂಕಣಿ ಸಂಗೀತಗಾರರಾಗಿದ್ದ ಸ್ವರ್ಗೀಯ ವಿಲ್ಫಿ ರೆಮಿಂಬಸ್ ಮತ್ತು ಎರಿಕ್ ಒಝೆರಿಯೋ ಅವರಿಗೆ ಸಮರ್ಪಿತಸ್ಫೂರ್ತಿದಾಯಕ ಸ್ವಾಭಿಮಾನದ ಕೊಂಕಣಿ ಸಂಜೆ’ ಕಾರ್ಯಕ್ರಮದಲ್ಲಿ ಲಾಂಛನ ಬಿಡುಗಡೆಗೈದು `ಲೋಬೊ ಪ್ರೊಡಕ್ಶನ್’ ಅನಾವರಣಗೊಳಿಸಿ ಲಾರೇನ್ಸ್ ಡಿ’ಸೋಜಾ ಶುಭಾರೈಸಿದರು.

ಶೀಘ್ರದಲ್ಲೇ ತೆರೆ ಕಾಣಲಿರುರ `ವೇಳ್ ಘಡಿ’ ಕೊಂಕಣಿ ಚಲನಚಿತ್ರದ ವೀಡಿಯೋ ತುಣುಕು (ಟೀಸರ್), ಹಾಡು ಬಿಡುಗಡೆ (ಮ್ಯೂಸಿಕ್ ಲಾಂಚ್), ಭಿತ್ತಿಪತ್ರ ಬಿಡುಗಡೆ (ಪೋಸ್ಟರ್ ರಿಲೀಸ್) ಹಾಗೂ ಲೋಬೊ ಪ್ರೊಡಕ್ಷನ್ ಅನಾವರಣ ಕಾರ್ಯಕ್ರಮದಲ್ಲಿ ದೈಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‍ನ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ ಮುಖ್ಯ ಅತಿಥಿಯಾಗಿದ್ದು, ಜುವಾನಿಟಾ ಎಂಟರ್‍ಪ್ರೈಸಸ್ ಬಿಲ್ಡರ್ ಎಂಡ್ ಡೆವಲಪರ್‍ನ ವ್ಯವಸ್ಥಾಪಕ ನಿರ್ದೇಶಕ ಗಿಲ್ಬರ್ಟ್ ಡಿಸೋಜಾ ಕಾರ್ಯಕ್ರಮ ಉದ್ಘಾಟಿಸಿದರು.

ಗೌರವ್ವಾನಿತ ಅತಿಥಿಗಳಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಮ್ ಸ್ಟಾ ್ಯನಿ ಅಲ್ವಾರೆಸ್, ಎಂಸಿಸಿ ಬ್ಯಾಂಕ್ ಲಿಮಿಟೆಡ್ (ಮಂಗಳೂರು) ಕಾರ್ಯಾಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೋ ಫೆರ್ಮಾಯಿ, ಚಲನಚಿತ್ರ ನಿರ್ಮಾಪಕ ಹಾಗೂ ಡಿ’ಅಲ್ಮೇಡಾ ಡೆವಲಪರ್ಸ್‍ನ ಅಧ್ಯಕ್ಷ ಗ್ರೆಗರಿ ಡಿ’ಅಲ್ಮೇಡಾ, ಬೋಂಬೆ ಹೈಕೋರ್ಟ್‍ನ ಹಿರಿಯ ವಕೀಲ, ಪಿ.ವಾಸ್ ಏಂಡ್ ಕಂಪೆನಿ ಸಂಸ್ಥಾಪಕ ಅಡ್ವೊಕೇಟ್ ಪಿಯೂಸ್ ವಾಸ್ ಒಮ್ಜೂರ್, ವೆಲ್ ವಿನ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ವಿನ್ಸೆಂಟ್ ಮಥಾಯಸ್, ಫಿಲ್ಮ್‍ಫೇರ್ ಪ್ರಶಸ್ತಿ ಪುರಸ್ಕೃತ ಸ್ಟಂಟ್ ಸಾಹಸ ನಿರ್ದೇಶಕ ಸುನಿಲ್ ರೋಡ್ರಿಗಸ್ ಅತಿಥಿಗಳಾಗಿದ್ದರು. ಲೋಬೋ ಫೌಂಡೇಶನ್‍ನ ವ್ಯವಸ್ಥಾಪಕ ಟ್ರಸ್ಟಿ, ವೇಳ್ ಘಡಿ'ಚಿತ್ರದ ನಿರ್ಮಾಪಕ,ಲೋಬೊ ಪ್ರೊಡಕ್ಷನ್ ನ ಕಾರ್ಯಾಧ್ಯಕ್ಷ ಜೋನ್ ವಿಲ್ಸನ್ ಲೋಬೋ,ಸಂಯೋಜಕಿಯರಾದ ವೈಲೆಟ್ ವಿಲ್ಸನ್ ಲೋಬೋ,ರುಥ್ ಜೆ.ಲೋಬೋ,ವೇಳ್ ಘಡಿ’ ಲೇಖಕ ರೋಶನ್ ನೆಲ್ಲಿಗುಡ್ಡೆ ವೇದಿಕೆಯಲ್ಲಿದ್ದರು.

ಗ್ರೆಗರಿ ಡಿ’ಅಲ್ಮೇಡಾ ಅವರು `ವೇಳ್ ಘಡಿ’ ಚಿತ್ರದ ಭಿತ್ತಿಪತ್ರ (ಪೋಸ್ಟರ್), ಚಲನಚಿತ್ರ ನಿರ್ದೇಶಕ, ಚಿತ್ರಕಥೆಗಾರ ಹ್ಯಾರಿ ಫೆರ್ನಾಂಡಿಸ್ ಬಾರ್ಕೂರು ಅವರು ವೀಡಿಯೋ ತುಣುಕು (ಟೀಸರ್), ಅನಿಲ್ ಲೋಬೋ ಅವರು ಹಾಡು ಬಿಡುಗಡೆ (ಮ್ಯೂಸಿಕ್ ಲಾಂಚ್) ಗೊಳಿಸಿದರು.

ಪ್ರಾದೇಶಿಕ ಭಾಷಾ ಚಲನಚಿತ್ರಗಳೂ ಸಿನಿಮಾಭಿಮಾನಿಗಳ ಆಸಕ್ತಿಗೆ ತಕ್ಕಂತೆ ಮೂಡಿದಾಗ ಚಿತ್ರಪ್ರೇಮಿಗಳಲ್ಲೂ ವೀಕ್ಷಣಾ ಉಲ್ಲಾಸ ಹೆಚ್ಚಾಗುತ್ತದೆ. ಸದ್ಯ ಚಲನಚಿತ್ರ ಪ್ರೇಮಿಗಳ ಕಾತರಕ್ಕೆ ಕೊಂಕಣಿ ಸಿನೆಮಾಗಳೂ ಸಜ್ಜಾಗುತ್ತಿದ್ದು ಇವುಗಳಿಗೆ ವೀಕ್ಷಕರ ಬೆಂಬಲ ಪ್ರಧಾನವಾಗಿರಬೇಕು. ಅವಾಗಲೇ ಸಫಲವಾದ ಸಿನೆಮಾಗಳು ತೆರೆಕಾಣಲು ಸಾಧ್ಯ ಎಂದು ವಾಲ್ಟರ್ ನಂದಳಿಕೆ ನುಡಿದರು.
ಕೊಂಕಣಿ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಜನಪ್ರಿಯ ಕೊಂಕಣಿ ಸಂಗೀತ ಸಂಯೋಜಕ ಲಾರೇನ್ಸ್ ಸಲ್ಡಾನ್ಹಾ ಇವರಿಗೆ ಗಾಯಾನ್ ಧೀರ್',ಅಡ್ವೊಕೇಟ್ ಜೆನೆವೀವ್ ವಾಸ್ ಇವರಿಗೆಕಾನೂನ್ ಭೂಷಣ್’ ಸಮಾಜ ಸೇವಕರು ಹಾಗೂ ಮುಂಬಯಿಯಲ್ಲಿನ ಕಾರ್ಯಕ್ರಮ ಸಂಘಟಕರಾದ ಲಿಯೋ ಫೆರ್ನಾಂಡಿಸ್ (ಜೆರಿಮೆರಿ) ಇವರಿಗೆ ಸೇವೆಚೆಂ ಮೊತಿಂ' ಮತ್ತು ಕ್ಲಾಡಿ ಫ್ರಾನ್ಸಿಸ್ ಮೊಂತೆರೋ ಮರೋಲ್ ಇವರಿಗೆ ಸೇವೆಚೊ ದಿವೋ’, ಬಿರುದುಗಳೊಂದಿಗೆ ಹಾಗೂ ಬಾಪಾಚೆ ಪುತಾಚೆ ನಾಂವಿಂ' ಚಿತ್ರದ ಲೇಖಕ ಮತ್ತು ನಿರ್ದೇಶಕ ಸ್ಟ್ಯಾನಿ ಡಿ'ಸೋಜಾ ಬೇಳಾ ಇವರಿಗೆಕೊಂಕಣಿ ಟ್ಯಾಲೆಂಟ್ ಲ್ಯುಮಿನರಿ’ (ಕೊಂಕಣಿ ಕೌಶಲ್ಯ ಜ್ಞಾನನಿಧಿ) ಮತ್ತು ಜೋನ್ ವಿಲ್ಸನ್ ಲೋಬೋ ಇವರಿಗೆ `ಹೆಲ್ಪಿಂಗ್ ಆಂಜೆಲ್’ ಗೌರವ ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಲಾಯಿತು. ಹಾಗೂ ಬ್ಯಾಂಕ್ವೆಟ್ ಫುಡ್ ನಿರ್ದೇಶಕ ಲ್ಯಾನ್ಸಿ ಬಾರ್ಬೋಜಾ (ಲೋರೆಟ್ಟೊ), ಸಮಾಜ ಸೇವಕ ತೋನ್ಸೆ ಸಂಜೀವ ಪೂಜಾರಿ, ಆಕ್ಷನ್ ಎಫೆಕ್ಟ್ ಅಸ್ ಸ್ಪೆಷಲಿಸ್ಟ್ ನವೀನ್ ಲೋಬೋ ಮೊಡಂಕಾಪು ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಲಾರೇನ್ಸ್ ಬಿ.ಡಿ’ಸೋಜಾ (ಸಾಜನ್), ಅಡ್ವಕೇಟ್ ಜೆನೆವೀವ್ ಪಿ.ವಾಸ್, ಉದ್ಯಮಿಗಳಾದ ಆಲ್ವಿನ್ ಸಿಕ್ವೇರಾ ಗಾರ್ಡಾಡಿ, ಕೊನಾಲ್ಡ್ ಜೆ.ಬ್ಯಾಪ್ಟಿಸ್ಟ್, ಪ್ರೆಮೀಳಾ ವಿ.ಮಥಾಯಸ್, ರಂಗನಟ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ, ಕೊಲಿನ್ ಮಾರ್ಟಿಸ್, ಲಿಸ್ಟನ್ ಕುಟಿನ್ಹೋ, ಕೆಲ್ವಿನ್ ಜೋಶ್ವಾ, ಆ್ಯಂಟನಿ ಸಿಕ್ವೇರಾ (ಆರ್ಕೇಡಿಯಾ), ಐವಾನ್ ರೆಬೆಲ್ಲೋ, ಎರಿಕ್ ಕಾರ್ವಾಲೋ, ರೆಜಿನಾಲ್ಡ್ ಸಾಂತ್‍ಮಾಯೆರ್ ವಸಾಯಿ, ಡಾಯಾನ್ ಡಿ’ಸೋಜಾ ವಿರಾರ್, ಫಿಲಿಪ್ ಮಾರ್ಕ್ ಫ್ರಾಂಕ್ ಆಗ್ರಾರ್, ಸುಸಾನ್ ಲಾರೇನ್ಸ್ ಕುವೆಲ್ಲೋ, ಕ್ಲೋಡಿ ಮೊಂತೆರೋ ಮರೋಳ್, ಜ್ಯೂಲಿಯೆಟ್ ಪಿರೇರಾ ಸೇರಿದಂತೆ ಗಣ್ಯರನೇಕರು ಉಪಸ್ಥಿತರಿದ್ದರು.

ರೇಶ್ಮಾ ಅನಿಲ್ ಡಿಅಲ್ಮೇಡಾ, ಜೋಸ್ಫಿನ್ ರೋಡ್ರಿಗಸ್ ಮತ್ತು ರೀಮಾ ರಾಸ್ಕಿನ್ಹಾ ಪ್ರಾರ್ಥನೆಯನ್ನಾಡಿದರು. ಜೋನ್ ವಿಲ್ಸನ್ ಲೋಬೋ ಸ್ವಾಗತಿಸಿದರು. ರೋಶನ್ ನೆಲ್ಲಿಗುಡ್ಡೆ ಪ್ರಸ್ತ್ತಾವನೆಗೈದರು. ಫ್ಲೋರಾ ಡಿಸೋಜಾ ಜೆರಿಮೆರಿ ಮತ್ತು ಸಿರಿಲ್ ಕ್ಯಾಸ್ತೇಲಿನೊ ಕಾರ್ಯಕ್ರಮ ನಿರೂಪಿಸಿದರು. ವಿಲಿಯಂ ಡಿಸೋಜಾ ವಕೋಲಾ ವಂದಿಸಿದರು.

Leave a Reply

Your email address will not be published. Required fields are marked *