ಮಂಗಳೂರು, ಮೇ.18: ಬಳ್ಳಾರಿ ಮೂಲದ ರಕ್ಷಿತಾ ಎಂ (21) ಎಂಬವರು ಪ್ರಸ್ತುತ ನಗರದ ಬಂಗ್ರ ಕೂಳೂರು ದಂಬೆಲ್ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಮೇ 9 ರಂದು ತನ್ನ ಮಗ ಆದರ್ಶ್ (1)ನೊಂದಿಗೆ ಮನೆಯಿಂದ ಹೋದವರು ಈವರೆಗೆ ಮನೆಗೂ ಬಾರದೇ ಕಾಣೆಯಾಗಿರುವ ಪ್ರಕರಣ ಕಾವೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಕಾಣೆಯಾದವರ ಚಹರೆ : ಎತ್ತರ ಸುಮಾರು 5.0 ಅಡಿ, ಸಾಧಾರಣ ಶರೀರ, ಕೋಲು ಮುಖ ಬಲ ಕೈಯಲ್ಲಿ ಎ ಎಂಬ ಹಚ್ಚೆ ಗುರುತು ಇರುತ್ತದೆ. ಲಂಬಾಣಿ, ಕನ್ನಡ ಭಾಷೆ ಮಾತನಾಡುತ್ತಾರೆ.
ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಕಾವೂರು ಪೊಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
