ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆ ತಾಲೂಕಿನ ಪುತ್ತಿಗೆ ಗ್ರಾಮದ ಚಿಟ್ಟೆಮಾರ್ ಪದ್ಮಾವತಿ ಚಾರಿಟೇಬಲ್ ಟ್ರಸ್ಟ್ ನವರು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನದೊಂದಿಗೆ ಪುತ್ತಿಗೆಯಲ್ಲಿ ಪದ್ಮಾವತಿ ಜೈನ ಸಮುದಾಯ ಭವನ ಜೂನ್ ಒಂದರಂದು ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿ ಆಶೀರ್ವಚನಗೈದ ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ ಸನಾತನ ಧರ್ಮದ ಧಾರ್ಮಿಕ ಕ್ರಿಯೆಗಳಿಗೆ ಪುತ್ತಿಗೆ ಹೆಸರುವಾಸಿ. ಇಲ್ಲಿಯ ರೈತರು ಕಷ್ಟ ಸಹಿಷ್ಣುಗಳಾಗಿದ್ದು, ಪಾಕ ಪ್ರವೀಣರು, ಸಮರ್ಪಣಾ ಭಾವದಿಂದ ದುಡಿಯುವವರು. ಇಂತಹ ಸ್ಥಳದಲ್ಲಿ ಕಟ್ಟಲ್ಪಟ್ಟ ಈ ಸಮುದಾಯ ಭವನ ಎಲ್ಲರಿಗೂ ಉಪಯೋಗ ಉಂಟುಮಾಡುವಂತದ್ದು. ಎಲ್ಲರೂ ಸೇರಿ ಸವಾಲುಗಳನ್ನು ಎದುರಿಸಿ ಮುನ್ನಡೆಯಲು ಸಲಹೆಯನ್ನು ನೀಡಿದರು.



ವೇದಿಕೆಯಲ್ಲಿ ಸಂಪಿಗೆ ಸುಧಾಕರ ತಂತ್ರಿ, ಅಡಿಗಳ್ ಅನಂತ ಕೃಷ್ಣ ಭಟ್, ಅರಮನೆ ಕುಲದೀಪ್ ಎಂ, ಕೆ ಪಿ ಜಗದೀಶ್ ಅಧಿಕಾರಿ, ಕೆ ಶ್ರೀಪತಿ ಭಟ್, ಸುಕೇಶ್ ಕುಮಾರ ಜೈನ್ ಕಡಂಬು, ಬಾಹುಬಲಿ ಪ್ರಸಾದ್, ಶ್ವೇತಾ ಜೈನ್, ಮಹೇಂದ್ರ ಕುಮಾರ್ ಜೈನ್, ರಶ್ಮಿತಾ, ಭಾರತಿ, ನವೀನ್ ಚಂದ್ರ ಹೆಗ್ಡೆ, ಅಧ್ಯಕ್ಷ ನಾಗವರ್ಮ ಜೈನ್ ಹಾಜರಿದ್ದರು.
ಡಾ. ಅನುಷಾ ಸ್ವಾಗತಿಸಿದರು. ಕಾರ್ಯದರ್ಶಿ ಸುನೀಶ್ ಕುಮಾರ್ ಜೈನ್ ವಂದಿಸಿದರು.
