ಅಂಕ ಗಳಿಕೆಗಿಂತ ಜೀವನ ಮೌಲ್ಯ ಹಾಗೂ ಸಂಸ್ಕಾರ ಬೆಳೆಸಿಕೊಳ್ಳಿ- ವಿವೇಕ ಚೈತನ್ಯಾನಂದ ಮಹಾರಾಜ್

ಮೂಡುಬಿದಿರೆ ತಾಲೂಕಿನ ಪಾಡ್ಯಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ದಾನಿಗಳ ಸಹಾಯದಿಂದ ಒದಗಿಸಲಾದ ಶಾಲಾ ಬ್ಯಾಗ್ ಬರವಣಿಗೆ ಸಾಮಗ್ರಿಗಳು ನೋಟ್ ಪುಸ್ತಕ ಕೊಡೆ ಊಟದ ತಟ್ಟೆ ಲೋಟ ನೀರಿನ ಬಾಟಲ್ ಮತ್ತು ಎಕ್ಸಾಮ್ ಪ್ಯಾಡ್ ಮುಂತಾದವುಗಳನ್ನು ವಿತರಿಸಿ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಜೀವನ ಮೌಲ್ಯಗಳನ್ನು ಪಡೆದುಕೊಂಡು ಸಮಾಜಕ್ಕೆ ಆದರ್ಶರಾಗಿ ಎಂದು ರಾಮಕೃಷ್ಣ ತಪೋವನ ಪೊಳಲಿ ಇಲ್ಲಿನ ವಿವೇಕ ಚೇತಾನ್ಯಾನಂದ ಮಹಾರಾಜ್ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ದಾನಿಗಳಾದ ದಯಾನಂದ ಪೈ ಹೋಟೆಲ್ ಸಾಗರ್ ನ ಮಾಲಕ ಅರುಣ್ ಕುಮಾರ್, ಮಯೂರಿ ಟೆಕ್ಸ್ಟೈಲ್ ಪರವಾಗಿ ಕೃಷ್ಣಾನಂದ ಪ್ರಭು, ಪ್ರಜ್ವಲ್ ಶೆಣೈ, ಪ್ರಸನ್ನ ಶೆಣೈ ಎಸ್ ಡಿ ಎಂ ಸಿ ಅಧ್ಯಕ್ಷ ರಮೇಶ್ ಆಚಾರ್ಯ ,ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಸ್ ನಾಗೇಶ್ ಸ್ಥಳೀಯರಾದ ವಿಶ್ವನಾಥ ಕಾಮತ್ ಉಪಸ್ಥಿತರಿದ್ದರು. ದಾನಿಗಳಾಗಿರುವ ಧೀರಜ್ ಶೆಣೈ, ಸುರೇಂದ್ರ ಭಂಡಾರ್ಕರ್, ಗೀತಾ ಉಮೇಶ್ ಕಿಣಿ, ಆಶಾಪುರ್ ಸ್ಟೇಷನರಿ, ಗೌತಮಿ ಪೈ ಮುಂತಾದವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮವನ್ನು ಮುಖ್ಯ ಶಿಕ್ಷಕ ಪ್ರಸನ್ನ ಶೆಣೈ ನಿರೂಪಿಸಿದರು ಸಹ ಶಿಕ್ಷಕ ರಾಬರ್ಟ್ ಡಿಸೋಜಾ ವಂದಿಸಿದರು. ಶಿಕ್ಷಕಿ ಪ್ರತಿಭಾ ಸಹಕರಿಸಿದರು.

Leave a Reply

Your email address will not be published. Required fields are marked *