ವಿಶೇಷ ಮಕ್ಕಳಿಗೆ ಅಗತ್ಯ ವಸ್ತುಗಳ ಕೊಡುಗೆ

ಆಗಸ್ಟ್ 13, 2026ರಂದು ಸ್ನೇಹಿ ಸಹೋದರಿಯರು ಸೇರಿ ಕ್ಷೇತ್ರ ಸಂಪನ್ಮೂಲ ಕೇಂದ್ರ ಮಂಗಳೂರು ಉತ್ತರ ಇಲ್ಲಿನ ವಿಶೇಷ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ನೀಡಿದರು. ಅಗತ್ಯವಿರುವ ಅರ್ಹರಿಗೆ ತಮ್ಮಿಂದಾದ ಕೊಡುಗೆ ನೀಡುವ ಉದ್ದೇಶವನ್ನಿಟ್ಟುಕೊಂಡಿರುವ ಸ್ನೇಹಿ ಸಹೋದರಿಯರು ಇಂದು ಕ್ಷೇತ್ರ ಸಂಪನ್ಮೂಲ ಕೇಂದ್ರ, ಮಂಗಳೂರು, ಉತ್ತರ ಇಲ್ಲಿಯ ವಿಶೇಷ ಮಕ್ಕಳಿಗೆ ಅವರ ಅವಶ್ಯಕತೆ ಅನುಸಾರವಾಗಿ ಕೊಡುಗೆಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ವೇದಾವತಿ ರಾವ್, ವಿಶೇಷ ಸಂಪನ್ಮೂಲ ಶಿಕ್ಷಕರಾದ ನಾಗರಾಜ್, ರವಿಕಲ ಹಾಗೂ ಜ್ಯೋತಿ ಮತ್ತು ಮಕ್ಕಳ ಪೋಷಕರು ದಿವ್ಯಾಂಗ ಮಕ್ಕಳ ಜೊತೆ ಹಾಜರಿದ್ದರು. ಸ್ನೇಹಿ ತಂಡದ ಸಂಚಾಲಕಿ ಕಲಾವತಿ ಪದ್ಮನಾಭ, ಭಾರತಿ ರಾವ್, ಉಷಾ ಪ್ರಭಾಕರ್, ಗೀತಾ ಶೆಟ್ಟಿ, ಸ್ವರ್ಣ ಶೆಟ್ಟಿ, ಸ್ವರ್ಣಲತಾ ಎಂ., ರತ್ನಾವತಿ ಜೆ. ಬೈಕಾಡಿ, ಉಷಾ ಕಿರಣ್, ಜ್ಯೋತಿಕಾ ಜೈನ್, ವಿಜಯ ಮಲ್ಲಿ, ಡಯನಾ, ನಿರ್ಮಲ, ಉಷಾ ಶೆಟ್ಟಿ, ವಸಂತಿ ಕಾಮತ್, ಶಾಂಭವಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *