ಮೂಡುಬಿದಿರೆ, ಆಗಸ್ಟ್ 14: ಮೂಡುಬಿದಿರೆ ಶ್ರೀ ದಿಗಂಬರ ಜೈನ ಮಠಕ್ಕೆ ಶುಕ್ರವಾರ ಬೆಳಿಗ್ಗೆ 9.30ಕ್ಕೆ ಮಂಗಳೂರು ರಾಮಕೃಷ್ಣ ಮಠದ ಜಿತಕಾಮಾನಂದ ಸ್ವಾಮೀಜಿ ಹಾಗೂ ಆಂಧ್ರಪ್ರದೇಶದ ಕಡಪದ ಸ್ವರೂಪಾನಂದ ಸ್ವಾಮೀಜಿ ಭೇಟಿ ನೀಡಿದರು.



ಈ ಸಂದರ್ಭದಲ್ಲಿ ಉಭಯ ಸ್ವಾಮೀಜಿಗಳು ಮಠದಲ್ಲಿರುವ ಭಗವಾನ್ ಪಾರ್ಶ್ವನಾಥ ಸ್ವಾಮಿ ಹಾಗೂ ಮಹಾಮಾತೆ ಕುಷ್ಮಾಂಡಿನಿ ದೇವಿಯ ದರ್ಶನ ಪಡೆದರು. ಬಳಿಕ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರೊಂದಿಗೆ ಧರ್ಮಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಮೂಡುಬಿದಿರೆ ಜೈನ ಮಠದ ವತಿಯಿಂದ ಉಭಯ ಸ್ವಾಮೀಜಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಜಯಂತ ಕುಮಾರ್ ಹಾಗೂ ಪ್ರಜ್ವಲ್, ಮೂಡುಬಿದಿರೆ ಉಪಸ್ಥಿತರಿದ್ದರು.
