ಕಲಾಂಗಣದಲ್ಲಿ ಸನ್ಮಾನ ಮತ್ತು ಸಂಗೀತ ಸಂಜೆ

ಮಂಗಳೂರು: ಮಾಂಡ್‌ ಸೊಭಾಣ್‌ ನಿಂದ ಸುಮೇಳ್‌ ಸಹಯೋಗದಲ್ಲಿ ಅಕ್ಟೋಬರ್ 04 ರಂದು ಕಲಾಂಗಣದಲ್ಲಿ ಅಂತರಾಷ್ಟ್ರೀಯ ಸಂಗೀತ ದಿನಾಚರಣೆ ಮತ್ತು ತಿಂಗಳ ವೇದಿಕೆ ಸರಣಿಯ 298 ನೇ ಕಾರ್ಯಕ್ರಮ ‌ʻವಿವಿದ್‌ ನಿನಾದ್‌ʼ ಸಂಗೀತ ರಸಮಂಜರಿ ನಡೆಯಿತು. ಈ ಸಂದರ್ಭದಲ್ಲಿ ಹಿರಿಯ ಸಂಗೀತ ತರಬೇತುದಾರ ಚಾರ್ಲ್ಸ್‌ ಡಿಮೆಲ್ಲೊ ಅವರನ್ನು ಗೌರವಿಸಲಾಯಿತು. ಅನಿವಾಸಿ ಉದ್ಯಮಿ ಲಿಯೊ ರೊಡ್ರಿಗಸ್‌ ಸನ್ಮಾನಿಸಿ ʻʻಓರ್ವ ಸಂಗೀತ ಶಿಕ್ಷಕರನ್ನು ಗೌರವಿಸುವ ಈ ಪರಿಪಾಟ ಒಳ್ಳೆಯದು. ತನ್ನ 82 ನೇ ವಯಸ್ಸಿನಲ್ಲಿಯೂ ಅವರು ಸಂಗೀತ ನುಡಿಸುತ್ತಾರೆ ಮತ್ತು ಇತರರಿಗೂ ಶಿಸ್ತಿನಿಂದ ಕಲಿಸುತ್ತಾರೆ. ಅವರ ಈ ಉತ್ಸಾಹ ಯುವಜನರಿಗೆ ಪ್ರೇರಣೆಯಾಗಲಿ. ಅವರ ವಿದ್ಯಾರ್ಥಿಗಳು ಈ ಸಂಗೀತ ಪಯಣವನ್ನು ಮುನ್ನಡೆಸಲಿʼʼ ಎಂದು ಶುಭ ಹಾರೈಸಿದರು.

ಸುಮೇಳ್‌ ಸಮನ್ವಯಿ ರೈನಾ ಸಿಕ್ವೇರಾ ಪ್ರಸ್ತಾವನೆ ನೀಡಿ ಸುಮೇಳ್‌ ಗಾಯನ ಮಂಡಳಿ ನಡೆದ ಬಂದ ದಾರಿಯ ಬಗ್ಗೆ ಬೆಳಕು ಚೆಲ್ಲಿದರು. ಲೀಜಾ ತಾಕೊಡೆ ಸನ್ಮಾನ ಪತ್ರ ವಾಚಿಸಿದರು. ಸುಮೇಳ್‌ ಕೋಶಾಧಿಕಾರಿ ಕ್ಲಾರಾ ಪಿಂಟೊ, ಮಾಂಡ್‌ ಸೊಭಾಣ್ ಪದಾಧಿಕಾರಿಗಳಾದ ರೊನಿ ಕ್ರಾಸ್ತಾ ಮತ್ತು ಸುನೀಲ್‌ ಮೊಂತೇರೊ, ಮುಂಬಯಿ ಪ್ರತಿನಿಧಿ ಲಿಯೊ ಫೆರ್ನಾಂಡಿಸ್ ಅರುಣ್‌ ರಾಜ್‌ ರೊಡ್ರಿಗಸ್‌, ಬೆನೆಡಿಕ್ಟಾ ರೆಬೆಲ್ಲೊ ಮುಂಬಯಿ, ಐರಿನ್‌ ಡಿಮೆಲ್ಲೊ , ಲವಿನಾ ರೊಡ್ರಿಗಸ್‌ ಅಬುದಾಭಿ, ಲೈನಲ್‌ ಡಿಮೆಲ್ಲೊ, ಲೊಯೊಲ್ಲಾ ಡಿಸೋಜ, ಕ್ಯಾರಲ್‌ ರೊಡ್ರಿಗಸ್‌ ಮತ್ತಿತರರು ಉಪಸ್ಥಿತರಿದ್ದರು. ಕೇರನ್‌ ಮಾಡ್ತಾ ನಿರೂಪಿಸಿದರು.

ಉದ್ಯಮಿ ಮತ್ತು ಸಮಾಜ ಸೇವಕ ಜೊನ್‌ ಸುರೇಶ್ ಗಂಟೆ ಬಾರಿಸಿ ತಿಂಗಳ ವೇದಿಕೆಗೆ  ಚಾಲನೆ ನೀಡಿದರು. ನಂತರ ಸುಮೇಳ್‌ ಮತ್ತು ವಿಂಟರ್‌ ಟೋನ್‌ ಬಂಟ್ವಾಳ ತಂಡಗಳಿಂದ ಬಾಯ್ಲಾ, ಸ್ವಿಂಗ್, ಜೈವ್, ಸ್ಲೋ & ಫಾಸ್ಟ್ ವಾಲ್ಟ್ಸ್, ಅಕಪೆಲಾ, ರೊಕ್, ಜನಪದ, ರುಂಬಾ, ರೆಗೆ, ಡಿಸ್ಕೊ, ಭಾಂಗ್ರಾ ಮತ್ತು ಟಪೊರಿ ಹೀಗೆ ವಿವಿಧ ಶೈಲಿ ಮತ್ತು ಪ್ರಕಾರಗಳಿಂದ ಆಯ್ದ ಕೊಂಕಣಿ ಹಾಡುಗಳನ್ನು ಹಾಡಿದರು. ಸಂಜಯ್‌ ರೊಡ್ರಿಗಸ್‌ ನಿರ್ದೇಶನದಲ್ಲಿ ಸ್ಟಾಲಿನ್ ಡಿಸೋಜ, ಸಂಜಿತ್ ರೊಡ್ರಿಗಸ್, ವಿಕ್ಷಿತ್ ಮತ್ತು ರೊಶನ್ ಬೇಳ ಸಂಗೀತ ನೀಡಿದರು. 

Leave a Reply

Your email address will not be published. Required fields are marked *