ಕಾರ್ಕಳ: ಪ್ರಸಕ್ತ ಸಾಲಿನ ಉನ್ನತ ಶಿಕ್ಷಣ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶವೊಂದನ್ನು ಸಾಣೂರಿನ ರಾಜೇಶ್ವರಿ ಪದವಿ ಪೂರ್ವ ಕಾಲೇಜು ಹೊತ್ತು ತಂದಿದೆ. ಕಾಲೇಜಿನಲ್ಲಿ ಅಡ್ವಾನ್ಸ್ ಪಿ.ಯು ಶಿಕ್ಷಣ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳಿಗಾಗಿ ‘ವಿದ್ಯಾರ್ಥಿವೇತನ ಪರೀಕ್ಷೆ 2026’ ಅನ್ನು ಆಯೋಜಿಸಲಾಗಿದ್ದು, ಸದ್ಯ ನೋಂದಣಿ ಪ್ರಕ್ರಿಯೆ ಭರದಿಂದ ಸಾಗಿದೆ.

ವಿದ್ಯಾರ್ಥಿವೇತನ ಪರೀಕ್ಷೆಯು ಬರುವ 2026ರ ಅಕ್ಟೋಬರ್ 17 ಶನಿವಾರದಂದು ರಾಜೇಶ್ವರಿ ಪದವಿ ಪೂರ್ವ ಕಾಲೇಜು, ಸಾಣೂರು, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ — ಈ ಆವರಣದಲ್ಲಿ ನಡೆಯಲಿದೆ.
ಪರೀಕ್ಷಾ ಪಠ್ಯಕ್ರಮ (Syllabus):
10ನೇ ತರಗತಿಯ ಗಣಿತ ಮತ್ತು ವಿಜ್ಞಾನ ವಿಷಯಗಳನ್ನು ಆಧರಿಸಿ ಪರೀಕ್ಷೆ ನಡೆಯಲಿದೆ.
- ಗಣಿತ (Mathematics): ನೈಜ ಸಂಖ್ಯೆಗಳು, ಬಹುಪದೋಕ್ತಿಗಳು, ಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣಗಳ ಜೋಡಿಗಳು, ವರ್ಗಸಮೀಕರಣಗಳು, ಸಮಾಂತರ ಶ್ರೇಢಿಗಳು, ನಿರ್ದೇಶಾಂಕ ರೇಖಾಗಣಿತ.
- ವಿಜ್ಞಾನ – ಭೌತಶಾಸ್ತ್ರ (Physics): ವಿದ್ಯುಚ್ಛಕ್ತಿ, ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು.
- ವಿಜ್ಞಾನ – ರಸಾಯನಶಾಸ್ತ್ರ (Chemistry): ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು, ಆಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು.
- ವಿಜ್ಞಾನ – ಜೀವಶಾಸ್ತ್ರ (Biology): ಜೀವ ಕ್ರಿಯೆಗಳು, ನಿಯಂತ್ರಣ ಮತ್ತು ಸಹಭಾಗಿತ್ವ.
ಪರೀಕ್ಷೆಯ ಸ್ವರೂಪ (Exam Pattern): - ಒಟ್ಟು ಪ್ರಶ್ನೆಗಳು: 60 ಬಹುಆಯ್ಕೆ ಪ್ರಶ್ನೆಗಳು (MCQ)
- ಒಟ್ಟು ಅಂಕಗಳು: 120 (ಪ್ರತಿಯೊಂದು ಪ್ರಶ್ನೆಗೆ 2 ಅಂಕಗಳು)
- ಸಮಯಾವಕಾಶ: 60 ನಿಮಿಷಗಳು (1 ಗಂಟೆ)
- ಉತ್ತರಿಸುವ ವಿಧಾನ: OMR ಶೀಟ್ ಮೂಲಕ
- ವಿಷಯವಾರು ಪ್ರಶ್ನೆ ಹಂಚಿಕೆ:
- ಗಣಿತ: 30 ಪ್ರಶ್ನೆಗಳು
- ವಿಜ್ಞಾನ: 30 ಪ್ರಶ್ನೆಗಳು (ಭೌತಶಾಸ್ತ್ರ – 10, ರಸಾಯನಶಾಸ್ತ್ರ – 10, ಜೀವಶಾಸ್ತ್ರ – 10)
ಸೀಟುಗಳ ಸಂಖ್ಯೆ ಮಿತಿಯಾಗಿದ್ದು, ಆಸಕ್ತ ವಿದ್ಯಾರ್ಥಿಗಳು ಹಾಗೂ ಪೋಷಕರು ಕೂಡಲೇ ಗೂಗಲ್ ಫಾರ್ಮ್ ಲಿಂಕ್ (https://forms.gle/3B1uhyLu1zoShA8s6) ಮೂಲಕ ನೋಂದಾಯಿಸಿಕೊಳ್ಳಲು ಕೋರಲಾಗಿದೆ.
ಹೆಚ್ಚಿನ ವಿವರಗಳಿಗಾಗಿ ಮತ್ತು ನೋಂದಣಿ ಸಹಾಯಕ್ಕಾಗಿ ಈ ಕೆಳಗಿನ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು:
80953 41169 | 87621 19917 | 97403 94285 | 98800 41916
