ಅ. ರಂದು ಕಾರಂತರ 124 ನೇ ಜನ್ಮದಿನಾಚರಣೆ ಕಾರ್ಯಕ್ರಮ

ಉಡುಪಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ. ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಕಾರಂತರ 124 ನೇ ಜನ್ಮದಿನಾಚರಣೆ ಮತ್ತು ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ಸಮಾರಂಭವು ಅಕ್ಟೋಬರ್ 09 ರಂದು ಬೆಳಿಗ್ಗೆ 11:30 ಕ್ಕೆ ನಗರದ ಬ್ರಹ್ಮಗಿರಿಯ ರೆಡ್‍ಕ್ರಾಸ್ ಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಖ್ಯಾತ ಜಾನಪದ ವಿದ್ವಾಂಸ ಮತ್ತು ಚಿಂತಕ ಡಾ. ಗಣೇಶ್‍ ಅಮೀನ್ ಸಂಕಮಾರ್‍ ಉದ್ಘಾಟಿಸಲಿದ್ದು, ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಅಧ್ಯಕ್ಷತೆ ವಹಿಸಲಿದ್ದಾರೆ.
ಚಿಂತಕ ಸಂಕಯ್ಯ ಶೆಟ್ಟಿ ಕಾರಂತರೊಂದಿಗಿನ ಅನುಭವದ ನುಡಿಗಳಾನ್ನಾಡಲಿದ್ದು, ಕರಾವಳಿ ರಂಗಾಯಣದ ನಿರ್ದೇಶಕ ಬಿ.ಆರ್ ವೆಂಕಟರಮಣ ಐತಾಳ, ಸಹಾಯಕ ಪ್ರಾಧ್ಯಪಕಿ ಮತ್ತು ಸಂಯೋಜಕಿ ರೇಡಿಯೋ ಮಣಿಪಾಲ ಡಾ.ರಶ್ಮಿ ಅಮ್ಮೆಂಬಳ ಭಾಗವಹಿಸಲಿದ್ದಾರೆ ಎಂದು ಟ್ರಸ್ಟಿನ ಸದಸ್ಯ ಕಾರ್ಯದರ್ಶಿಗಳ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *