ಮಂಗಳೂರು ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169 ಅವಾಂತರಗಳು. ಎಲ್ಲಿದ್ದಾರೆ ಸಂಸದರು???

ವರದಿ ರಾಯಿ ರಾಜ ಕುಮಾರ
ಮಂಗಳೂರು ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169 ಅತ್ಯಂತ ದಯೆನೀಯ ಅವಾಂತರಗಳಿಗೆ ಕಾರಣವಾಗುತ್ತಿದೆ.
ಪ್ರಾರಂಭದಲ್ಲಿ ಬಹಳ ನೇರವಾಗಿ ಮತ್ತು ಸಾಕಷ್ಟು ಸರಕಾರಿ ಪ್ರದೇಶಗಳಲ್ಲಿಯೇ ಹಾದು ಹೋಗುವಂತೆ ಒಪ್ಪಿತಗೊಂಡಿದ್ದರೂ, ಕೆಲವಾರು ಸ್ಥಾಪಿತ ಹಿತಾಸಕ್ತಿಗಳ ಕಾರಣದಿಂದಾಗಿ ಅಲ್ಲಲ್ಲಿ ಬೇಕಾಬಿಟ್ಟಿ ತಿರುವುಗಳನ್ನು ಸ್ಥಾಪಿಸಿ ಹೆದ್ದಾರಿಯನ್ನು ಅಧ್ವಾನಗೊಳಿಸಲಾಗಿದೆ. ಸ್ಥಾಪಿತ ಹಿತಾಸಕ್ತಿಗಳ ತಿರುವುಗಳಿಂದಾಗಿ ತೊಂದರೆ ಅನುಭವಿಸುತ್ತಿರುವ ಕೆಲವರು ಸುಪ್ರೀಂ ಕೋರ್ಟಿನ ಮೊರೆ ಹೋಗಿರುವುದು ಇದಕ್ಕೆ ಉತ್ತಮ ಉದಾಹರಣೆ.

ಸಾಣೂರಿನಲ್ಲಿನ ತಪ್ಪು ರಚನೆಗಳಿಂದಾಗಿ ವಾಹನ ಅಪಘಾತ, ಜೀವ ಹಾನಿಗಳು ಸಂಭವಿಸಿದ್ದನ್ನು ತರುವಾಯ ಸರಿಪಡಿಸಲಾಯಿತು.
ಇತ್ತೀಚೆಗೆ ಕೆಸರುಗದ್ದೆ, ಬನ್ನಡ್ಕ ಪರಿಸರದಲ್ಲಿ ಸೂಕ್ತ ಸರ್ವಿಸ್ ರಸ್ತೆ ಇಲ್ಲದೆ ಆದ ಹಾನಿಗಳನ್ನು ಕೂಡ ನಾವು ಕಂಡಿದ್ದೇವೆ. ಈ ಸಂದರ್ಭದಲ್ಲಿ ಸಾಮಾನ್ಯ ಜನರ ಅನಿಯಂತ್ರಿತ ಚಾಲನೆಯ ಜೊತೆಗೆ ರಸ್ತೆಯ ಅವಾಂತರಗಳು ಕಾರಣವಾಗಿದ್ದವು.

ಇದೀಗ ಮಳೆಗಾಲ ಪ್ರಾರಂಭವಾದ ಈ ಸಂದರ್ಭದಲ್ಲಿ ಹೆದ್ದಾರಿಯಿಂದ ಮಳೆಯ ನೀರು ಇಳಿದು ಹೋಗಲು ಸಮರ್ಪಕವಾದ ವ್ಯವಸ್ಥೆ ಇಲ್ಲದೆ ಬೇಕಾಬಿಟ್ಟಿ ನಿರ್ಮಾಣಕ್ಕೆ ಉದಾಹರಣೆಯಾಗಿದೆ. ಬೆಳುವಾಯಿ, ಕೆಸರುಗದ್ದೆ ಪ್ರದೇಶದಲ್ಲಿ ಸುಮಾರು ಒಂದೂವರೆ ಫೀಟುಗಳಿಗೂ ಎತ್ತರಕ್ಕೆ ನೀರು ನಿಲ್ಲುತ್ತಿದ್ದು ನಡೆದಾಡುವವರಿಗೆ ಬಿಡಿ, ವಾಹನದವರಿಗೂ ಹೋಗಲು ಅಸಾಧ್ಯವಾಗಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಗಳಿಗೆ ಜವಾಬ್ದಾರಿ ಇಲ್ಲವೇ?? ಸರಿಯಾದ ತಿಳುವಳಿಕೆ ಇಲ್ಲವೇ?? ಬೇಕೆಂದೆ ಇಂತಹ ರಚನೆಗಳನ್ನು ಮಾಡುತ್ತಿದ್ದಾರೆಯೇ?? ಸ್ಥಳೀಯ ಸಂಸದರು ಏಕೆ ಮೌನವಾಗಿದ್ದಾರೆ??? ಅವರಿಗೂ ಜವಾಬ್ದಾರಿ ಇಲ್ಲವೇ???

Leave a Reply

Your email address will not be published. Required fields are marked *