ಉರ್ವ: ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಒಂದು ದಿನದ ಶಿಕ್ಷಕರ ವೃತ್ತಿ ಮಾರ್ಗದರ್ಶನ (ಓರಿಯಂಟೇಷನ್) ಕಾರ್ಯಕ್ರಮ

ಉರ್ವ: ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಒಂದು ದಿನದ ಶಿಕ್ಷಕರ ವೃತ್ತಿ ಮಾರ್ಗದರ್ಶನ (ಓರಿಯಂಟೇಷನ್) ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಇಮ್ಯಾಕ್ಯುಲೇಟ್ ಚರ್ಚ್‍ನ ಗುರುಗಳು ಹಾಗೂ ಶಾಲಾ ಸಂಚಾಲಕರಾದ ವಂ. ಬೆಂಜಮಿನ್ ಪಿಂಟೊ ಅವರು ಶಿಕ್ಷಕರು ವೃತ್ತಿ ಕೌಶಲ್ಯಗಳನ್ನು ಬೆಳೆಸಿ ಬೋಧಿಸುವುದು ಉತ್ತಮ ಎಂಬ ಸಲಹೆಯನ್ನು ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ರೆ. ಫಾ. ಕಿರಣ್‍ ಅವರು ಶಿಕ್ಷಕರು ಬೋಧನಾ ಸಂದರ್ಭದಲ್ಲಿ ಯಾವ ರೀತಿಯ ಬೆಳವಣಿಗೆಗಳನ್ನು ಅನುಸರಿಸಬೇಕು ಹೇಗೆ ತರಗತಿಯಲ್ಲಿ ವಿದ್ಯಾರ್ಥಿಗಳ ಜೊತೆಗೆ ಇರಬೇಕು ಎನ್ನುವುದರ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡಿದರು. ಶಾಲಾ ಮುಖ್ಯೋಪಾದ್ಯಾಯರಾದ ಅಲೋಶಿಯಸ್‍ ಡಿಸೋಜ ಅವರು ಸಂಪನ್ಮೂಲ ವ್ಯಕ್ತಿಯನ್ನು ಸ್ವಾಗತಿಸಿ ಪರಿಚತಿಸುತ್ತಾ ಒಂದು ದಿನದ ಈ ಮಾಹಿತಿ ಶಿಬಿರದಲ್ಲಿ ಶಿಕ್ಷಕರು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದು ಬೋಧನೆಯಲ್ಲಿ ಅಳವಡಿಸಬೇಕು ಎಂದರು.

ಈ ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕಿಯರಾದ ಲವೀನಾ ಡಿಕುನ್ಹ, ಲವೀನಾ ಪಿಂಟೊ ಹಾಗೂ ಸಹಶಿಕ್ಷಕರು ಉಪಸ್ಥಿತರಿದ್ದರು. ವಿಶಿತಾ ಡಿಸೋಜರವರು ಕಾರ್ಯಕ್ರಮವನ್ನು ನಿರೂಪಿಸಿ ಶಿಕ್ಷಕಿ ತ್ರಿವೇಣಿ ಅವರು ಧನ್ಯವಾದ ಸಮರ್ಪಿಸಿದರು.

Leave a Reply

Your email address will not be published. Required fields are marked *