ಕಾರ್ಕಳದ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಅಧ್ಯಕ್ಷರ ಹಸ್ತಕ್ಷೇಪ: ಸಾಮಾಜಿಕ ಕಾರ್ಯಕರ್ತೆ ರಮಿತಾ ಸೂರ್ಯವಂಶಿ ಗಂಭೀರ ಆರೋಪ

ಕಾರ್ಕಳ: ಮಹಿಳೆಯರ ರಕ್ಷಣೆ ಹಾಗೂ ಸಾಂತ್ವಾನ ಕ್ಕಾಗಿ ಕಾರ್ಯನಿರ್ವಹಿಸುವ ಕೇಂದ್ರದಲ್ಲಿ ಮಹಿಳಾ ಒಕ್ಕೂಟದ ಅಧ್ಯಕ್ಷರು
ಹಾಗೂ ಪದಾಧಿಕಾರಿಗಳ ಹಸ್ತಕ್ಷೇಪ ಇರಬಾರದು ಎಂದು ಸಾಮಾಜಿಕ ಕಾರ್ಯಕರ್ತೆ ರಮಿತಾ ಸೂರ್ಯವಂಶಿ ಸರಕಾರವನ್ನು ಒತ್ತಾಯಿಸಿದರು.
ಕಾರ್ಕಳ ಪತ್ರಿಕ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೌನ್ಸಿಲಿಂಗ್ ಸಿಬ್ಬಂದಿ ನೇಮಕ ಹಾಗೂ ಕೇಂದ್ರದ ಆಡಳಿತದಲ್ಲಿ ಯಾವುದೇ ಸಂಘಟನೆ ಅಥವಾ ವ್ಯಕ್ತಿಯ ಪ್ರಭಾವ ಇರಬಾರದು ಕೌನ್ಸಿಲಿಂಗ್ ಅನ್ನು ಸರಕಾರದಿಂದ ನೇಮಕಗೊಂಡು ಅರ್ಹ ಸಿಬ್ಬಂದಿಗಳಿಂದಲೇ ನಡೆಸಬೇಕು ಸ್ವಂತಾನ ಕೇಂದ್ರದ ಸಿಬ್ಬಂದಿ ಆಯ್ಕೆಯಲ್ಲಿ ಯೂ ಮಹಿಳಾ ಒಕ್ಕೂಟದ ಹಸ್ತಕ್ಷೇಪಕ್ಕೆ ಅವಕಾಶ ನೀಡಲೇಬಾರದು ಎಂದು ಹೇಳಿದರು.

ಆದ್ದರಿಂದ NGO ಅಧೀನದಲ್ಲಿ ಇರುವ ಸಾಂತ್ವನ ಕೇಂದ್ರವನ್ನು ಸರ್ಕಾರವೇ ನಡೆಸಬೇಕು. ಹಾಗೂ ಪ್ರತೀ 5 ವರ್ಷಗಳಿಗೊಮ್ಮೆ ಅಧ್ಯಕ್ಷರನ್ನು ಬದಲಾಯಿಸಬೇಕು. ಮುಖ್ಯವಾಗಿ CDPO ಅವರು ಮಹಿಳಾ ಸಾಂತ್ವನ ಕೇಂದ್ರದ ಮೇಲುಸ್ತುವಾರಿ ನೋಡಿಕೊಂಡು ಮಹಿಳೆಯರ ಕುಂದುಕೊರತೆಗಳನ್ನು ಆಲಿಸಬೇಕು. ಒಕ್ಕೂಟದ ಅಧ್ಯಕ್ಷರಿಗೆ ಕೇವಲ ನಿರ್ವಹಣೆ ಜವಾಬ್ದಾರಿ ಮಾತ್ರವೇ ಹೊರತು ಸಾಂತ್ವನ ಕೇಂದ್ರದ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಹೇಳಿದರು. ಕಾರ್ಕಳ ಸಾಂತ್ವಾನ ಕೇಂದ್ರದಲ್ಲಿ ಅಧ್ಯಕ್ಷರೇ ಪ್ರಕರಣಗಳ ಕೌನ್ಸಿಲಿಂಗ್ ನಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಈ ಪದ್ಧತಿಗೆ ಅವಕಾಶ ಮಾಡಿಕೊಡಬಾರದು ಈಗಾಗಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಡಿಪಿಓ ಉಪನಿರ್ದೇಶಕರು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ದೂರು ನೀಡಲಾಗಿದೆ ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕೆಂದು ಎಂದು ಹೇಳಿದರು.

Leave a Reply

Your email address will not be published. Required fields are marked *