ಕಾರ್ಕಳ: ಪೆರ್ಡೂರಿನಲ್ಲಿ ಇತೀಚಿಗೆ ನಡೆದ ಪ್ರಕರಣದಲ್ಲಿ ಯುವಕ ಯುವತಿಯ ಪ್ರೇಮವು ದ್ವೇಷಕ್ಕೆ ಪರಿವರ್ತನೆಯಾಗಿ ಸಾವಿನಲ್ಲಿ ಅಂತ್ಯವಾಗಿದೆ ಇಂತಹ ದುರ್ಘಟನೆಯನ್ನು ಸಮಾಜ ಅರಗಿಸಿಕೊಳ್ಳಲು ಅಸಾದ್ಯವಾಗುತ್ತದೆ ಹಾಗಾಗಿ ಈ ಸಂದರ್ಭದಲ್ಲಿ ಸಾರ್ವಜನಿಕರ ಮತ್ತು ಸಂಘಟನೆಗಳ ವರ್ತನೆ ಅತ್ಯಂತ ಪ್ರಮುಖವಾಗುತ್ತದೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್, ಪೆರ್ಡೂರು ಪ್ರಕರಣದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈಗಾಗಲೇ ಮಾಹಿತಿ ನೀಡಿದ್ದಾರೆ. ಆದರೆ ಪ್ರೇಮ ದ್ವೇಷಕ್ಕೆ ತಿರುಗಿ ದುರಂತ ಅಂತ್ಯ ಕಾಣಲು ಕಾರಣವಾದ ಅಂಶಗಳನ್ನು ಪೊಲೀಸರು ಸಮಗ್ರವಾಗಿ ತನಿಖೆ ನಡೆಸಿ ಜನರ ಮುಂದಿಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಒತ್ತಾಯಿಸಿದರು.
ಈ ಪ್ರಕರಣದ ಮೊದಲ ಸಂತ್ರಸ್ಥೆ ಯುವತಿ ಅವಳಿಗಾದ ಅನ್ಯಾಯಕ್ಕೆ ನ್ಯಾಯ ಸಿಗಬೇಕು, ಎರಡನೇ ಸಂತ್ರಸ್ತ ಪ್ರದೀಪ್ ಪೂಜಾರಿ ಅವನ ಸಾವಿಗೂ ನ್ಯಾಯ ಸಿಗಬೇಕು ಎರಡೂ ಕಡೆಯ ನೋವು ಮತ್ತು ದುಃಖದಲ್ಲಿ ನಾವು ಸಮಾನವಾಗಿ ಭಾಗಿಯಾಗುತ್ತೇವೆ ಅವರಿಬ್ಬರಿಗೂ ಸಿಗಬೇಕಾದ ನ್ಯಾಯದ ಹೋರಾಟದಲ್ಲಿ ನಾವೂ ಸಮಾನವಾಗಿ ಭಾಗಿಯಾಗುತ್ತೇವೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಸಮಿತಿ ಆಗ್ರಹಿಸಿದೆ.
ಈ ಪ್ರಕರಣದಲ್ಲಿರುವ ಯುವಕ ಯುವತಿ ಎರಡು ಪ್ರಮುಖ ಸಮಾಜದವರು ಆ ಎರಡೂ ಸಮಾಜಗಳು ಈ ನೆಲದ ಶಾಂತಿ ಸೌಹಾರ್ದತೆ ಮತ್ತು ಸಹಬಾಳ್ವೆಗೆ ಬಹುದೊಡ್ಡ ಕೊಡುಗೆ ಇದೆ ಅವರೆಲ್ಲರೂ ಜಾಗರೂಕತೆಯಿಂದ ಹೆಜ್ಜೆ ಇಡಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು. ಯಾಕೆಂದರೆ ಪರಸ್ಪರ ಎರಡು ಸಮಾಜವನ್ನು ಎತ್ತಿಕಟ್ಟುವ ಕೆಲಸವನ್ನು ಈಗಾಗಲೇ ಕೆಲವರು ಪ್ರಾರಂಬಿಸಿದ್ದಾರೆ ಸಮಸ್ಯೆ ಧರ್ಮದ ನಡುವೆಯಾದರೆ ಸಂಘಟನೆಯನ್ನು ಎತ್ತಿಕಟ್ಟುವ ಮತ್ತು ಸಮಸ್ಯೆ ಧರ್ಮದ ಒಳಗಾದರೆ ಸಮಾಜವನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಅದಕ್ಕೆ ಮೊನ್ನೆ ಪ್ರದೀಪನ ಮೃತದೇಹ ಕೊಂಡು ಹೋಗುತ್ತಿದ್ದ ವಾಹನದಲ್ಲಿ ಇದ್ದ ವ್ಯಕ್ತಿ ಆತ್ರಾಡಿಯಲ್ಲಿ ಸೊರಕೆಯವರ ಭಾಷಣ ನಡಿತಿದೆ ದಿಕ್ಕಾರ ಕೂಗೋಣ ಎನ್ನುವ ಅಘಾತಕಾರಿ ಪ್ರಚೋದನೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.
ಪ್ರದೀಪ್ ಪೂಜಾರಿಯವರ ಸಾವಿನ ತಕ್ಷಣ ಕೆಲವು ರಣಹದ್ದುಗಳು ರಣರಂಗಕ್ಕೆ ಇಳಿದಿವೆ ಪ್ರದೀಪನ ಮೇಲೆ ಅತ್ಯಾಚಾರದ ಅರೋಪ ಇದ್ದಾಗ ಅವನು ಕಾಂಗ್ರೆಸ್ ಆಗಿದ್ದ, ಅವನು ಉದಯ್ ಶೆಟ್ಟಿಯವರ ಆಪ್ತ ಆಗಿದ್ದ ಇಡೀ ಸುನೀಲ್ ಕುಮಾರ್ ಆಪ್ತ ಕಾರ್ಕಳದ ಐಟಿ ಸೆಲ್ ಎಲ್ಲಾ ಸದಸ್ಯರು ಅವನ ವಿರುದ್ದ ಅವಹೇಳನ ಪೋಸ್ಟ್ ಹಾಕಿವೆ ಅವನ ತೇಜೋವಧೆ ಮಾಡಿವೆ, ಇನ್ನು ಕೆಲವರು ಅವನಿಗೆ ಜಾಮೀನು ಸಿಗದಂತೆ ನೋಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದರು.
ಪ್ರದೀಪನ ಸಾವಿನ ನಂತರ ಕುಂದಾಪುರ ಗಿಳಿಯೊಂದರ ಪಂಚೇದ್ರಿಯಗಳು ಜಾಗೃತವಾಗುತ್ತದೆ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರದೀಪನ ಕೊಲೆಯನ್ನು ಕಾಂಗ್ರೆಸ್ ನಾಯಕರು ಮಾಡಿಸಿದ್ದಾರೆ ಎಂದು ನಮ್ಮ ನಾಯಕರ ಮೇಲೆ ನೇರ ಆರೋಪ ಮಾಡುತ್ತಾರೆ ಅವರಿಗೆ ಕುಮ್ಮಕ್ಕು ಶಾಸಕ ಸುನೀಲ್ ಕುಮಾರದ್ದು ಯಾಕೆಂದರೆ ಅವರಿಗೆ ಪ್ರದೀಪನ ಸಾವಿನಲ್ಲಿ ರಾಜಕೀಯದ ಲಾಭ ಪಡೆಯುವುದೇ ಉದ್ದೇಶ ಆಗಿರುತ್ತದೆ ಕಾರ್ಕಳದಲ್ಲಿ ಯಾವ ವ್ಯಕ್ತಿ ತನ್ನ ಎದುರು ಪ್ರಭಾವಿಯಾಗಿದ್ದಾನೋ ಅವರ ಮೇಲೆ ಕೊಲೆ ಅರೋಪ ಹೊರಿಸುವುದು ಅವರ ಹಳೆಯ ಚಾಳಿಯಾಗಿದೆ ಅಂದು ಸುಚೇತಾ ಶೆಟ್ಟಿ ಇಂದು ಪ್ರದೀಪ್ ಪೂಜಾರಿ ಎಂದು ಆರೋಪಿಸಿದರು.
ಪ್ರದೀಪ್ ಪೂಜಾರಿಯ ಸಾವಿಗೆ ನ್ಯಾಯ ಕೇಳುವಂತೆ ದಿನೇಶ್ ಪೂಜಾರಿಯ ಸಾವಿಗೂ ನ್ಯಾಯ ಕೇಳಬೇಕಲ್ಲವೇ? ದಿನೇಶ್ ಪೂಜಾರಿ ಬಿಜೆಪಿ ಕಾರ್ಯಕರ್ತರಾಗಿದ್ದರೂ ಅವರ ಸಾವಿನ ವಿಚಾರದಲ್ಲಿ ಶಾಸಕ ಸುನೀಲ್ ಕುಮಾರ್ ಹಾಗೂ ಬಿಜೆಪಿ ಐಟಿ ಸೆಲ್ ಮೌನವಾಗಿರುವುದೇಕೆ? ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎರಡೂ ಪ್ರಕರಣಗಳಲ್ಲಿಯೂ ಸತ್ಯ ಹೊರಬರಬೇಕು. ಯಾರೇ ತಪ್ಪಿತಸ್ಥರಾಗಿದ್ದರೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡರು ಒತ್ತಾಯಿಸಿದರು.
ಪೆರ್ಡೂರು ಪ್ರಕರಣವನ್ನು ರಾಜಕೀಯ ಮತ್ತು ಕೋಮು ಸಂಘರ್ಷಕ್ಕೆ ಬಳಸಿಕೊಳ್ಳದೆ, ಎರಡೂ ಸಂತ್ರಸ್ತರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸಮಾಜದ ಎಲ್ಲರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ತೆಳ್ಳಾರು ದಿನೇಶ್ ಪೂಜಾರಿ ಸಾವಿನ ಬಗ್ಗೆಯೂ ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಿ ಸಾರ್ವಜನಿಕರಲ್ಲಿರುವ ಅನುಮಾನಗಳಿಗೆ ಉತ್ತರ ನೀಡಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್, ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜೇಂದ್ರ ದೇವಾಡಿಗ ಹಾಗೂ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುದರ್ಶನ್ ಬಂಗೇರ ಕಾಂತಾವರ ಉಪಸ್ಥಿತರಿದ್ದರು.
