ಕಲಾಂಗಣದಲ್ಲಿ ‘ವಂದೇ ಮಾತರಂ’ ನಾಟಕ ಪ್ರದರ್ಶನ

ಮಂಗಳೂರು: ಶಕ್ತಿ ನಗರದ ಕಲಾಂಗಣದಲ್ಲಿ 2026 ರ ಸೆಪ್ಟೆಂಬರ್ 06 ರಂದು ಸಂಜೆ 6.30ಕ್ಕೆ ತಿಂಗಳ ವೇದಿಕೆ ಸರಣಿಯ 297ನೇ ಕಾರ್ಯಕ್ರಮವು ಜರುಗಿತು. ಗೋವಾದ ಪ್ರಸಿದ್ಧ ನಾಟಕಕಾರ ಅನಂತ್ ಕಾಮತ್ ಬಾಂಬೋಲ್ಕರ್ ಅವರು ಗಂಟೆ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಾಂಡ್‌ ಸೊಭಾಣ್‌ ಅಧ್ಯಕ್ಷ ಲುವಿ ಪಿಂಟೊ ಅತಿಥಿಗೆ ಹೂಗುಚ್ಛ ನೀಡಿ ಗೌರವಿಸಿದರು.

ಬಳಿಕ, ಗೋವಾ ಕೊಂಕಣಿ ಅಕಾಡೆಮಿಯಿಂದ ‘ಉತ್ಕೃಷ್ಟ ಸೇವಾ ಸಂಸ್ಥೆ’ ಪುರಸ್ಕಾರ ಪಡೆದಿರುವ ‘ಅಂತ್ರುಝ್ ಘುಡಿಯೊ’ ತಂಡದ ಕಲಾವಿದರು ‘ವಂದೇ ಮಾತರಮ್ ವೀರ್ ಧರ್ಮ್’ ಎಂಬ ನಾಟಕವನ್ನು ಉತ್ತಮವಾಗಿ ಪ್ರಸ್ತುತಪಡಿಸಿದರು.

‘ವಂದೇ ಮಾತರಂ’ ಗೀತೆಗೆ 150 ವರ್ಷ ತುಂಬಿದ ಸಂದರ್ಭದಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ನಾಟಕೋತ್ಸವದಲ್ಲಿಯೂ ಈ ನಾಟಕವು ಪ್ರದರ್ಶನಗೊಂಡು ಮೆಚ್ಚುಗೆಗೆ ಪಾತ್ರವಾಗಿತ್ತು. ಪುರುಷೋತ್ತಮ್ ಆನಂದಿ ಗುರುದಾಸ್ ಮರ್ಡೋಲ್ಕರ್ ಅವರು ರಚಿಸಿರುವ ಹಾಗೂ ಅನಂತ್ ಬಾಂಬೋಲ್ಕರ್ ಅವರ ನಿರ್ದೇಶನವಿರುವ ಈ ನಾಟಕವು, ಗೋವಾದ ಮೊಟ್ಟ ಮೊದಲ ಯುವ ಹುತಾತ್ಮ ‘ಬಾಲ ಮಾಪರಿ’ ಅವರ ಜೀವನ ಚರಿತ್ರೆಯನ್ನು ಆಧರಿಸಿದೆ.

Leave a Reply

Your email address will not be published. Required fields are marked *