ಮಾತೃಭಾಷೆಯ ಸೇವೆ ಮಾಡುವ ಅವಕಾಶಗಳನ್ನು ನಾವೇ ಹುಡುಕಬೇಕು: ಮಿಲಾಗ್ರಿಸ್ ಸೆಂಟ್ರಲ್ ಸ್ಕೂಲ್ ಪ್ರಾಂಶುಪಾಲ ಫಾ ಉದಯ್ ಫೆರ್ನಂಡಿಸ್

ಮಂಗಳೂರು, ಆ. 20: ಸಿಬಿಎಸ್‌ಇ ಅಂದರೆ ಇಂಗ್ಲಿಷ್ ಪ್ರಮುಖವಾಗಿ ಕಲಿಸುವ ಶಾಲೆ ಆದರೆ ಇಲ್ಲಿ ಮೂರನೆಯ ಭಾಷೆಯಾಗಿ ಮಾತೃಭಾಷೆ ಕಲಿಸುವ ಅವಕಾಶ ದೊರೆತಾಗ ಅದರ ಸದುಪಯೋಗ ಮಾಡಲು ನಾನು ಅಣಿಯಾಗಿದ್ದೇವೆ, ಎಂದು ಫಾ ಉದಯ್ ಫೆರ್ನಾಂಡಿಸ್ ನುಡಿದರು.
ಅವರು ಮಿಲಾಗ್ರಿಸ್ ಸೆಂಟ್ರಲ್ ಶಾಲೆಯಲ್ಲಿ ಕೊಂಕಣಿ ಮಾನ್ಯತಾ ದಿವಸದ ಆಚರಣೆ ಪ್ರಯುಕ್ತ ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಇವರ ಸಂಯುಕ್ತ ಆಶ್ರಯದಲ್ಲಿ ಕೊಂಕಣಿ ಸಂಘವನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು.

ನಾವು ಮುಂದಿನ ಶೈಕ್ಷಣಿಕ ವರ್ಷದಿಂದ ಮೂರನೇ ಭಾಷೆಯಾಗಿ ಕೊಂಕಣಿ ಕನ್ನಡ ಲಿಪಿಯಲ್ಲಿ ಕಲಿಸುವ ಬಗ್ಗೆ ಆಲೋಚನೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಕೊಂಕಣಿ ಮಾನ್ಯತಾ ದಿನದ ಮಾಹಿತಿ ನೀಡಿದ ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಅಧ್ಯಕ್ಷರಾದ ರೇಮಂಡ್ ಡಿಕೂನಾ ತಾಕೊಡೆ ಮಾತನಾಡಿ, ಕಷ್ಟ ಕಾಲದಲ್ಲಿ ತಾಯಿ ಮತ್ತು ತಾಯಿಭಾಷೆ ಯೇ ಆಸರೆಯಾಗಿ ಬರುವುದು.
ನಾವು ಎಷ್ಟು ಮೇಲೆರಿದರೂ ಮೊದಲ ಮಾತು ತಾಯಿಯ ಬಾಯಿಯಿಂದ ಕಿವಿಗೆ ಬಿದ್ದದು ಮರೆಯಬಾರದು ಮತ್ತು ಅದರ ಸೇವೆಯನ್ನು ಮಾಡಲು ಹಿಂಜರಿಯಬಾರದು ಎಂದು ಹೇಳಿ ವಿಧ್ಯಾರ್ಥಿಗಳಿಗೆ ಕೊಂಕಣಿ ಕ್ವಿಜ್ ನಡೆಸಿದರು.

ಕೆಬಿಎಂಕೆ ಖಜಾಂಚಿ ವಸಂತ ರಾವ್ ಹಾಗೂ ಮಿಲಾಗ್ರಿಸ್ ಪದವಿಪೂರ್ವ ಕಾಲೇಜಿ ಪ್ರಾಂಶುಪಾಲ ಮೆಲ್ವಿನ್ ವಾಸ್ ಶುಭ ಹಾರೈಸಿದರು.
ಜೂಲಿಯೆಟ್ ಫರ್ನಾಂಡೀಸ್, ಮರಿಯಾ ಪಿಂಟೊ, ಜೊನ್ ತಾವ್ರೊ, ಮೆಲಿಟಾ ಪೆರ್ನಾಂಡಿಸ್, ಗೊಡ್ವಿನ್ ಡಿಸೋಜ, ಐವನ್ ಕ್ರಾಸ್ತಾ, ಸ್ಮಿತಾ ಮಥಾಯಸ್ ಸಹಕರಿಸಿದರು.

Leave a Reply

Your email address will not be published. Required fields are marked *