ಧರ್ಮಸ್ಥಳದಲ್ಲಿ ‘ಕೆಸರ್‌ಡ್ ಒಂಜಿ ದಿನ’ ಸಂಭ್ರಮ

ಧರ್ಮಸ್ಥಳ: ಗ್ರಾಮೀಣ ಬದುಕಿನ ಸೊಗಡು, ಸಂಸ್ಕೃತಿ ಹಾಗೂ ಸಾಂಪ್ರದಾಯಿಕ ಕ್ರೀಡೆಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಮೂಡಂಗಲ್ ಫ್ರೆಂಡ್ಸ್, ಧರ್ಮಸ್ಥಳ ಇವರ ನೇತೃತ್ವದಲ್ಲಿ ಧರ್ಮಸ್ಥಳದಲ್ಲಿ ‘ಕೆಸರ್‌ಡ್ ಒಂಜಿ ದಿನ’ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು,“ಕೆಸರ್‌ಡ್ ಒಂಜಿ ದಿನದಂತಹ ಕಾರ್ಯಕ್ರಮಗಳು ಗ್ರಾಮೀಣ ಬದುಕಿನ ಸೊಗಡು, ಕೃಷಿ ಸಂಸ್ಕೃತಿ ಮತ್ತು ನಮ್ಮ ಪರಂಪರಾಗತ ಕ್ರೀಡೆಗಳನ್ನು ಹೊಸ ಪೀಳಿಗೆಗೆ ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಮಣ್ಣಿನೊಂದಿಗೆಮನುಷ್ಯನಿಗಿರವ ಅವಿನಾಭಾವ ಸಂಬಂಧವನ್ನು ಇಂತಹ ಕಾರ್ಯಕ್ರಮಗಳು ಮತ್ತಷ್ಟು ಗಟ್ಟಿಗೊಳಿಸುತ್ತವೆ. ಯುವಜನರು ನಮ್ಮ ಸಂಸ್ಕೃತಿ ಮತ್ತು  ಸಂಪ್ರದಾಯಗಳನ್ನು ಅರಿತು ಅವುಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಕ್ಕಳು, ಮಹಿಳೆಯರು ಹಾಗೂ ಪುರುಷರು ಸೇರಿದಂತೆ ವಿವಿಧ ವಯೋಮಾನದವರು ಉತ್ಸಾಹದಿಂದ ಭಾಗವಹಿಸಿದರು. ಕೆಸರುಗದ್ದೆಯಲ್ಲಿ ಆಯೋಜಿಸಲಾದ ವಿವಿಧ ಗ್ರಾಮೀಣ ಹಾಗೂ ಸಾಂಪ್ರದಾಯಿಕ ಕ್ರೀಡಾಸ್ಪರ್ಧೆಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು. ಕೆಸರಿನಲ್ಲಿ ಆಟವಾಡುತ್ತಾ ಸ್ಪರ್ಧಿಗಳು ಪ್ರದರ್ಶಿಸಿದ ಉತ್ಸಾಹ, ಚುರುಕುತನ ಮತ್ತು ಕ್ರೀಡಾಸ್ಫೂರ್ತಿ ನೆರೆದಿದ್ದವರನ್ನು ರಂಜಿಸಿತು. ಗ್ರಾಮೀಣ ಕ್ರೀಡೆಗಳ ಮೂಲಕ ಹಳೆಯ ಕಾಲದ ಕೃಷಿ ಬದುಕು ಮತ್ತು ಜನಪದ ಸಂಸ್ಕೃತಿಯನ್ನು ನೆನಪಿಸುವುದರ ಜೊತೆಗೆ, ಪರಸ್ಪರ ಬಾಂಧವ್ಯಹಾಗೂ ಸಾಮರಸ್ಯವನ್ನು ಬೆಳೆಸುವ ವೇದಿಕೆಯಾಗಿಯೂ ಕಾರ್ಯಕ್ರಮ ಮೂಡಿಬಂತು.  ಸ್ಥಳೀಯರು ಹಾಗೂ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ತಂದರು. ಈ ಸಂದರ್ಭದಲ್ಲಿ ಧರ್ಮಸ್ಥಳ ದೇವಸ್ಥಾನದ ಪಾರುಪತ್ಯಗಾರ್ ಪಿ. ಲಕ್ಷ್ಮೀನಾರಾಯಣ ರಾವ್, ಅನ್ನಪೂರ್ಣ ಛತ್ರದ ಮ್ಯಾನೇಜರ್ ಸುಬ್ರಹ್ಮಣ್ಯ ಪ್ರಸಾದ್, ವಕೀಲ ಕೇಶವ ಬೆಳಾಲ್, ಪ್ರಭಾಕರ ಪೂಜಾರಿ, ಉದಯ್ ಕುಮಾರ್,  ಗ್ರಾಮ ಪಂಚಾಯತ್ ಮಾಜಿ ಸದಸ್ಯರುಗಳಾದ ಮುರಳೀಧರ ದಾಸ್, ಹರ್ಷತ್ ಜೈನ್, ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಚಲನಚಿತ್ರ ನಟ ಯಶ್ ಧರ್ಮಸ್ಥಳಕ್ಕೆ ಭೇಟಿ

ಉಜಿರೆ: ಚಲನಚಿತ್ರ ನಟ ಯಶ್ ಮಂಗಳವಾರ ಧರ್ಮಸ್ಥಳಕ್ಕೆ ಬಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಚಲನಚಿತ್ರ ರಂಗದಲ್ಲಿ ಯಶ್‌ನ ಸೇವೆ ಮತ್ತು ಸಾಧನೆಯನ್ನು ಶ್ಲಾಘಿಸಿ ಅಭಿನಂದಿಸಿದ ಹೆಗ್ಗಡೆಯವರು ಇನ್ನೂ ಹೆಚ್ಚಿನ […]

ಹಂಪಿಯಿಂದ ಧರ್ಮಸ್ಥಳಕ್ಕೆ 380 ಕಿ.ಮೀ. ಸೈಕಲ್ ಭಕ್ತಿ ಜಾಥಾ: 65 ಯುವಕರಿಂದ 36 ವರ್ಷದ ಪರಂಪರೆಗೆ ಜೀವಂತಿಕೆ

ಧರ್ಮಸ್ಥಳ: ವಿಜಯನಗರ  ಜಿಲ್ಲೆಯ ಐತಿಹಾಸಿಕ ಹಂಪಿಯಿಂದ 65 ಮಂದಿ ಯುವಕರು ಸುಮಾರು 380 ಕಿಲೋಮೀಟರ್ ದೂರವನ್ನು ಸೈಕಲ್ ಮೂಲಕ ಕ್ರಮಿಸಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಭಕ್ತಿ, ಆರೋಗ್ಯ ಹಾಗೂ ಶಿಸ್ತಿನ ಅಪೂರ್ವ ಸಂದೇಶ […]

ತಮಿಳುನಾಡಿನ ಸುಬ್ರಹ್ಮಣ್ಯ ಸ್ವಾಮೀಜಿ ಧರ್ಮಸ್ಥಳ ಭೇಟಿ

ಉಜಿರೆ: ತಮಿಳುನಾಡು ರಾಣಿಪೇಟ್ ಜಿಲ್ಲೆಯ ರತ್ನಗಿರಿ ಬಾಲಮುರುಗನ್ ದೇವಸ್ಥಾನದ ಸುಬ್ರಹ್ಮಣ್ಯ ಸ್ವಾಮೀಜಿ ಗುರುವಾರ ಧರ್ಮಸ್ಥಳಕ್ಕೆ ಬಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಬಳಿಕ ದೇವರ ದರ್ಶನ ಮಾಡಿ ವಿಶೇಷ ಪೂಜೆ […]

ಧರ್ಮಸ್ಥಳದಲ್ಲಿ ರಾಜ್ಯ ಭಜನಾ ಪರಿಷತ್ ಸಭೆ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್‌ನ ನೇತೃತ್ವದಲ್ಲಿ ನಡೆಯಲಿರುವ 28ನೇ ವರ್ಷದ ಭಜನಾ ಕಮ್ಮಟದ ಪೂರ್ವಭಾವಿ ಸಭೆಯು ಧರ್ಮಸ್ಥಳದ ಅನ್ನಪೂರ್ಣ ಛತ್ರದ ಸಭಾಂಗಣದಲ್ಲಿ ನಡೆಯಿತು. ಸುಳ್ಯ ವಲಯ ಪರಿಷತ್ ಅಧ್ಯಕ್ಷೆ ಸವಿತಾ ಸಂದೇಶ್ […]

ಸಿಂಹ ಸಂಕ್ರಮಣ: ಧರ್ಮಸ್ಥಳದಲ್ಲಿ ಪಡಿಕಾಳು ವಿತರಣೆ

ಉಜಿರೆ: ಧರ್ಮಸ್ಥಳದಲ್ಲಿ ದೇವಸ್ಥಾನದಲ್ಲಿ ಸಂಪ್ರದಾಯದಂತೆ ಸಿಂಹ ಸಂಕ್ರಮಣ (ತುಳು: ಸೋಣ ಸಂಕ್ರಾಂತಿ)ದ ದಿನವಾದ ಆ. 15 ರಂದು ಶನಿವಾರ ತೆಂಗಿನ ಎಣ್ಣೆ ಮತ್ತು ಪಡಿಕಾಳು ವಿತರಿಸಲಾಯಿತು. ವಿತರಿಸಿದ ಪಡಿಕಾಳು: ಬೆಳ್ತಿಗೆ ಅಕ್ಕಿ: 14,278 ಕೆ.ಜಿ., […]

ಎಸ್.ಡಿ.ಎಂ. ಕಾಲೇಜಿನ ಹಿರಿಯ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ವಿದ್ಯಾರ್ಥಿವೇತನ ವಿತರಣೆ, ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನ, ಮಧ್ಯಾಹ್ನದ ಭೋಜನ ವ್ಯವಸ್ಥೆಗೆ ದೇಣಿಗೆ ಹಸ್ತಾಂತರ

ಉಜಿರೆ: ವಿದ್ಯೆ ಮತ್ತು ಮಾನವೀಯ ಮೌಲ್ಯಗಳಿಂದ ಸುಸಂಸ್ಕೃತ ಹಾಗೂ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ ಎಂದು ನಾವೂರದ ಆರೋಗ್ಯ ಕ್ಲಿನಿಕ್ ನ  ಡಾ. ಪ್ರದೀಪ್ ಆಟಿಕುಕ್ಕೆ ಹೇಳಿದರು. ಅವರು ಮಂಗಳವಾರ ಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜಿನ ಇಂದ್ರಪ್ರಸ್ಥ […]

ಧರ್ಮಸ್ಥಳದ ಭಕ್ತರಿಂದ ನೇತ್ರಾವತಿ ನದಿಗೆ ಬಾಗಿನ ಅರ್ಪಣೆ

ಉಜಿರೆ: ಧರ್ಮಸ್ಥಳದಲ್ಲಿ ಸ್ನಾನಘಟ್ಟದ ಬಳಿ ನೇತ್ರಾವತಿ ನದಿ ತುಂಬಿ ಹರಿಯುತ್ತಿದ್ದು ಪರಮಭಕ್ತರಾದ ಹಾಸನದ ಎಚ್.ವೈ. ಸೋಮಶೇಖರ್ ಕುಟುಂಬ ಸಮೇತರಾಗಿ ಹಾಗೂ ತಮ್ಮ ಆತ್ಮೀಯ ಬಳಗದವರೊಂದಿಗೆ ಸೋಮವಾರ ಧರ್ಮಸ್ಥಳಕ್ಕೆ ಬಂದು ನೇತ್ರಾವತಿ ಸ್ನಾನಘಟ್ಟದಲ್ಲಿ ಶ್ರದ್ಧಾ-ಭಕ್ತಿಯಿಂದ ಬಾಗಿನ […]

ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ಧರ್ಮಸ್ಥಳಕ್ಕೆ ಭೇಟಿ

ಧರ್ಮಸ್ಥಳ: ವಿಶ್ವ ಹಿಂದೂ ಪರಿಷತ್‌ನ ಅಂತಾರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಅವರು ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ  ನೀಡಿದರು. ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಹಾಗೂ ಸೇವೆ ಸಲ್ಲಿಸಿದ ಅವರು, ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ, ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್, ವಿಭಾಗ  ಸಾಮರಸ್ಯ ಪ್ರಮುಖ್ ಭಾಸ್ಕರ್ ಧರ್ಮಸ್ಥಳ, ವಿಭಾಗ ಮಠ – ಮಂದಿರ  ಪ್ರಮುಖ್  ಗುರುರಾಜ್ ತಂತ್ರಿ, ಮಂಗಳೂರು ಜಿಲ್ಲಾ  ಉಪಾಧ್ಯಕ್ಷ  ಮನೋಹರ್ ಸುವರ್ಣ, ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಸಹಕಾರ್ಯದರ್ಶಿ  ಪ್ರಮೋದ್ ರೈ,  ಕಡಬ  ತಾಲೂಕಿನ ಪ್ರಮುಖರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

ಧರ್ಮಸ್ಥಳದಲ್ಲಿ ಪುಸ್ತಕಗಳ ಲೋಕಾರ್ಪಣೆ, ಅಂಚೆ-ಕುಂಚ ಸ್ಪರ್ಧೆ ವಿಜೇತರ ಪುರಸ್ಕಾರ ಸಮಾರಂಭ

ಉಜಿರೆ: ಅಹಂ ಮತ್ತು ಕೀಳರಿಮೆ ತೊರೆದು ಇತರರಲ್ಲಿರುವ ಒಳ್ಳೆಯ ಗುಣಗಳನ್ನು ಗುರುತಿಸಿ ಗೌರವಿಸಬೇಕು. ಸಣ್ಣ ಸಣ್ಣ ಸತ್ಕಾರ್ಯಗಳನ್ನು ಮಾಡಿದರೂ ಸಾರ್ಥಕ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಹಾಗೂ […]