ಆಧುನಿಕತೆಯ ನೆಪದಲ್ಲಿ ಸಂಪ್ರದಾಯ ನಶಿಸುತ್ತಿದೆ – Article by Anjali Srinivas

ಅಂಜಲಿ ಶ್ರೀನಿವಾಸ ಖಟವಟೆ 
ಹುಬ್ಬಳ್ಳಿ

ಮದುವೆ ಎಂದರೆ  ಎರಡು ಮನಸ್ಸುಗಳು, ಸಂಸ್ಕೃತಿಗಳು ಮತ್ತು ಕುಟುಂಬಗಳ ನಡುವಿನ ಪವಿತ್ರ ಬಂಧ. ಇದು ಕೇವಲ ಇಬ್ಬರು ವ್ಯಕ್ತಿಗಳ ಒಪ್ಪಂದವಲ್ಲ, ಬದಲಿಗೆ ಪರಸ್ಪರ ನಂಬಿಕೆ, ಪ್ರೀತಿ, ಜವಾಬ್ದಾರಿ ಸಹಬಾಳ್ವೆ ಮತ್ತು ಹೊಂದಾಣಿಕೆಯ ಮೂಲಕ ಜೀವನದ ಏಳು-ಬೀಳುಗಳನ್ನು ಜೊತೆಯಾಗಿ ಎದುರಿಸುವ ಸುಂದರವಾದ ಪಯಣ. ಭಾರತೀಯ ಸಂಸ್ಕೃತಿಯಲ್ಲಿ  ಮದುವೆ ಸಂಪ್ರದಾಯ ವಿಶೇಷತೆ ಇದೆ.

ಕಾಲ ಬದಲಾದಂತೆ ಮದುವೆ ಸಂಪ್ರದಾಯಗಳು ಬದಲಾಗುತ್ತ ಹೋದವು. ಮನೆ ಮುಂದೆ ಚಪ್ಪರ ಹಾಕಿ ಮದುವೆ ಮಾಡುತಿದ್ದರು. ಬಂಧು ಬಳಗದವರಿಗೆ ಆದರಪೂರ್ವಕವಾಗಿ ಮುತೈದೆಯರನ್ನು ಕುಂಕುಮ ಹಚ್ಚಿ ಚಪ್ಪರಕ್ಕೆ ಬರಮಾಡಿಕೊಳ್ಳುತ್ತಿದ್ದರು. ಆದರೆ ಇಂದು ಮದುವೆ ಎಂಬುದು ಒಂದು ಪವಿತ್ರ ಸಂಸ್ಕಾರವಾಗಿ ಉಳಿಯುವ ಬದಲು, ಕೇವಲ ಪ್ರತಿಷ್ಠೆ ಪ್ರದರ್ಶನಕ್ಕಾಗಿ ಮಾಡುವ ಒಂದು ಕಾರ್ಯಕ್ರಮದಂತೆ ಬದಲಾಗುತ್ತಿದೆ. ಹಳೆಯ ಕಾಲದ ಮದುವೆಗಳಲ್ಲಿ ಇದ್ದ ಆ ಆತ್ಮೀಯತೆ ಮತ್ತು ದೈವಿಕ ಭಾವ ಇಂದು ಮರೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಪ್ರಿ-ವೆಡ್ಡಿಂಗ್ ಫೋಟೋಶೂಟ್, ಅಬ್ಬರದ ಡಿಜೆ ಶಬ್ದ,  ಡ್ಯಾನ್ಸ್ ಮಾಡುವುದು ಮತ್ತು ಕೇವಲ ರೀಲ್ಸ್‌ಗಳಿಗಾಗಿ ನಟಿಸುವುದು ಹೆಚ್ಚಾಗುತ್ತಿದೆ. ಮದುವೆಯ ಅಸಲಿ ಗಾಂಭೀರ್ಯ ಮತ್ತು ಮೆರುಗು ಮಾಯವಾಗಿದೆ   ಶಾಸ್ತ್ರಗಳು ಮತ್ತು ಮಂತ್ರಗಳ ಅರ್ಥಕ್ಕೆ ಹೆಚ್ಚಿನ ಮಹತ್ವವಿತ್ತು. ಸಂಪ್ರದಾಯಗಳ ಸೊಬಗು ಸರಳತೆಯ ಸೌಂದರ್ಯ.ಮದುವೆ ಯಾವುದೇ ಅಬ್ಬರದ ಸಂಗೀತವಿಲ್ಲದೆ, ಮಂಗಳ ವಾದ್ಯಗಳ ನಾದಸ್ವರ ನಡುವೆ ನಡೆಯುತ್ತಿದ್ದವು . ಅಂದು ನೆನಪುಗಳನ್ನು ಮನಸ್ಸಿನಲ್ಲಿ ಉಳಿಸಿಕೊಳ್ಳುತ್ತಿದ್ದರು, ಇಂದು ಅದನ್ನು ಕೇವಲ ಕ್ಯಾಮೆರಾ ಮತ್ತು ಸೋಶಿಯಲ್ ಮೀಡಿಯಾಗಾಗಿ ಸೃಷ್ಟಿಸಲಾಗುತ್ತಿದೆ. ಹಳೆಯ ಕಾಲದ ಮದುವೆ ಸಂಪ್ರದಾಯಬದ್ಧವಾಗಿತ್ತು.ಇಂದಿನ ಮದುವೆ ಆಧುನಿಕ ವೈಭವ ಮುಖ್ಯ ಉದ್ದೇಶ ಮದುವೆ ಒಂದು ಪವಿತ್ರ ‘ಸಂಸ್ಕಾರ’ ಮತ್ತು ಆಧ್ಯಾತ್ಮಿಕ ಸಂಬಂಧ ಎಂಬ ನಂಬಿಕೆ ಇತ್ತು.  ಅಬ್ಬರದ ಡಿಜೆ, ಐಟಂ ಸಾಂಗ್‌ಗಳು ಮತ್ತು ಕರ್ಕಶ ಶಬ್ದದಿಂದಾಗಿ ಮದುವೆಯ ಗಾಂಭೀರ್ಯವೇ ನಶಿಸುತ್ತಿದೆ. ವಧು-ವರರ ನಡವಳಿಕೆ ವಧು-ವರರಲ್ಲಿ ವಿನಯ, ನಾಚಿಕೆ ಮತ್ತು ಆ ಸಂಪ್ರದಾಯದ ಬಗ್ಗೆ ಭಕ್ತಿ ಇರುತ್ತಿತ್ತು. ಕ್ಯಾಮೆರಾ ಮುಂದೆ ರೀಲ್ಸ್‌ಗಾಗಿ ನಟಿಸುವುದು, ವೇದಿಕೆಯ ಮೇಲೆ ಅಸಹಜವಾಗಿ ನೃತ್ಯ ಮಾಡುವುದು ಹೆಚ್ಚಾಗಿದೆ. ಫೋಟೋಗ್ರಫಿ ಸಹಜವಾದ ಕ್ಷಣಗಳನ್ನು ಸೆರೆಹಿಡಿಯಲಾಗುತ್ತಿತ್ತು. ಫೋಟೋಗಳು ಜೀವನದ ನೆನಪುಗಳಾಗಿದ್ದವು.  ಅಂದು  ಪ್ರತಿಯೊಂದು ವಿಧಿಗೂ ಒಂದು ಅರ್ಥವಿರುತ್ತಿತ್ತು. ಊಟೋಪಚಾರ ಬಾಳೆ ಎಲೆಯಲ್ಲಿ ಬಡಿಸುವ ಸಾತ್ವಿಕ ಆಹಾರ ಮತ್ತು ಪ್ರೀತಿಯಿಂದ ಬಡಿಸುವ ಅತಿಥ್ಯವಿತ್ತು. ಮನುಷ್ಯ ಸಂಬಂಧಗಳಿಗಿಂತ ಮೆನು ಕಾರ್ಡ್ ದೊಡ್ಡದಾಗಿರುತ್ತದೆ.ಮೆಹಂದಿ ಸಂಗೀತದಲ್ಲಿ ವಧು ವರ ನೃತ್ಯ ಮಾಡುತ್ತಾರೆ ಅದು ಅವರ ಸಂತೋಷವೇನ್ನಬಹುದು. ಆದರೆ 

ಮದುವೆಯಲ್ಲಿ ಹಸೆಮಣೆಯಲ್ಲಿ ಕುಳಿತ ಮಧು ಮಗ ಮಧು ಮಗಳನ್ನು ಲಕ್ಷ್ಮಿ ನಾರಾಯಣನ ಸ್ವರೂಪವೆಂದು ಹೇಳಲಾಗುತ್ತದೆ.  ಇತ್ತೀಚಿನ ದಿನಗಳಲ್ಲಿ ಅನೇಕ ಆಧುನಿಕ ಕುಟುಂಬಗಳು ವಧುವನ್ನು ಸಂಭ್ರಮದಿಂದ ಸ್ವಾಗತಿಸಲು “ಗೃಹಪ್ರವೇಶ”ದ ಸಮಯದಲ್ಲೂ ಡಿಜೆ ಅಥವಾ ಹಾಡುಗಳ ಮೂಲಕ ನೃತ್ಯ ಮಾಡಲು ಪ್ರೋತ್ಸಾಹಿಸುತ್ತಾರೆ.ನಮ್ಮ  ಸಂಪ್ರದಾಯದ ಪ್ರಕಾರ, ವಧು ಹೊಸ ಮನೆಗೆ ಪ್ರವೇಶಿಸಿದಾಗ “ಲಕ್ಷ್ಮಿ”ಯಂತೆ ಶಾಂತವಾಗಿ ಬರಬೇಕೆಂದು ನಿರೀಕ್ಷಿಸಲಾಗುತ್ತದೆ. ಹಾಗಾಗಿ ಅನೇಕ ಕುಟುಂಬಗಳಲ್ಲಿ ಅಂಗಳದಲ್ಲಿ ನೃತ್ಯ ಮಾಡುವುದು ಅಸಹಜವೆನಿಸಬಹುದು.ಲಕ್ಷ್ಮಿಯನ್ನು ಆದರದಿಂದ ಬರಮಾಡಿಕೊಳ್ಳಿ. ಆಧುನಿಕತೆಯ ನೆಪದಲ್ಲಿ  ಅನಾದರದ ತಾಂಡವವಾಗದಿರಲಿ.

Leave a Reply

Your email address will not be published. Required fields are marked *