ಕಂದಾಯ ನಿರೀಕ್ಷಕ ಶಿವಪ್ರಸಾದ್ ರಾವ್ ನಿಧನಕ್ಕೆ ಉದಯ ಶೆಟ್ಟಿ ಮುನಿಯಾಲು ತೀವ್ರ ಸಂತಾಪ

ಕಾರ್ಕಳ ತಾಲೂಕು ಕಚೇರಿಯಲ್ಲಿ ಕಂದಾಯ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಶಿವಪ್ರಸಾದ್ ರಾವ್ ಅವರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಯಿತು. ಕರ್ತವ್ಯ ನಿಷ್ಟೆ, ಕಾರ್ಯ ತತ್ಪರತೆಯಿಂದ ಸೇವೆ ಸಲ್ಲಿಸುತ್ತಿದ್ದ ಅವರು ಜನ ಸ್ನೇಹಿ ಅಧಿಕಾರಿಯಾಗಿ ಎಲ್ಲರ ಮೆಚ್ವುಗೆಗೆ ಪಾತ್ರರಾಗಿದ್ದರು.

ಮೂಲತಃ ಕಾರ್ಕಳದ ನಂದಳಿಕೆಯವರಾಗಿದ್ದ ಅವರು “ಸರಕಾರದ ಕೆಲಸ ದೇವರ ಕೆಲಸ” ಎನ್ನುವ ವಾಕ್ಯದಂತೆ ತಮ್ಮ ಕರ್ತವ್ಯಕ್ಕೆ ಚ್ಯುತಿ ಬಾರದಂತೆ ಕೆಲಸ ನಿರ್ವಹಿಸಿ ಜನಮನ್ನಣೆ ಗಳಿಸಿರುವುದು ಅವರ ಪ್ರಾಮಾಣಿಕತೆಗೆ ಸಾಕ್ಷಿ. ಅವರ ಸರಳತೆ, ವೃತ್ತಿಯ ಮೇಲಿನ ಶ್ರದ್ದೆ ಮತ್ತು ಬದ್ದತೆ ಎಲ್ಲರಿಗೂ ಪ್ರೇರಣಾದಾಯಿಯಾಗಿದೆ.

ಶಿವಪ್ರಸಾದ್ ರಾವ್ ಅವರ ಅಗಲುವಿಕೆಯಿಂದ ಸರ್ಕಾರವು ಒಬ್ಬ ಧಕ್ಷ ಅಧಿಕಾರಿಯನ್ನು ಕಳೆದುಕೊಂಡಂತಾಗಿದ್ದು ಅವರ ಆತ್ಮಕ್ಕೆ ಚಿರ ಶಾಂತಿಯು ದೊರಕಲಿ, ಹಾಗೂ ಅವರ ಕುಟುಂಬ ವರ್ಗ, ಬಂಧು ಮಿತ್ರರಿಗೆ, ಸಹೋದ್ಯೋಗಿಗಳಿಗೆ ನೋವನ್ನು ಭರಿಸುವ ಶಕ್ತಿಯು ದೊರಕಲಿ ಎಂದು ಪ್ರಾರ್ಥಿಸುತ್ತೇನೆ.

Leave a Reply

Your email address will not be published. Required fields are marked *