ಫುಟ್ಬಾಲ್ ಫಿವರ್‍ಗೆ ಪಿದಾನಾದ ಶಿವಾ-ನ್ಯೂಜೆರ್ಸಿಯ ಮೆಟ್‍ಲೈಫ್ ಸ್ಟೇಡಿಯಂನಲ್ಲಿ ವರ್ಲ್ಡ್ ಕಪ್ ಹವಾ ಆನಂದಿಸಿ ಫಿಫಾಕ್ಕೆ ಸಾಕ್ಷಿಯಾದ ಶಿವರಾಮ ಭಂಡಾರಿ

(ವರದಿ / ಚಿತ್ರ ಸಂಗ್ರಹ: ರೋನ್ಸ್ ಬಂಟ್ವಾಳ್)
ಮುಂಬಯಿ, ಜು.20: ಜಗತ್ತಿನ ಅತ್ಯಂತ ಪ್ರತಿಷ್ಠಿತ ಮತ್ತು ಬೃಹತ್ ಕ್ರೀಡಾಕೂಟ ಎಂದೆಣಿಸಿದ ಫುಟ್‍ಬಾಲ್ (ಕಾಲ್ಚೆಂಡು) ಆಟದ ಕ್ರೀಡಾಪ್ರೇಮಿ ಆಗಿದ್ದು ಬಾಲ್ಯದಿಂದಲೇ ತನ್ನ ಅಕ್ಕರೆಯ ಫುಟ್‍ಬಾಲ್ ಆಟದ ಆಸಕ್ತ ಮತ್ತು ನಿಪ್ಪಟ ಕ್ರೀಡಾಭಿಮಾನಿ ಆಗಿರುವ ಬೃಹನ್ಮುಯಿಯಲ್ಲಿನ ಹೇರ್ ಸ್ಟೈಲೋ ಮೂಲಕ ಸೆಲೆಬ್ರಟಿ, ಕರ್ನಾಟಕ ಕರಾವಳಿಯ ಕಾರ್ಕಳ ಮೂಲತಃ ಪ್ರಸಿದ್ಧ ಕೇಶ ವಿನ್ಯಾಸಕ, ಶಿವಾ’ಸ್ ಹೇರ್ ಡಿಝೈನರ್ಸ್ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಡಾ| ಶಿವರಾಮ ಕೆ.ಭಂಡಾರಿ ಮುಖತಃ ಫೈನಲ್ ಪಂದ್ಯಾಟ ವೀಕ್ಷಿಸಿ ತನ್ನ ನೆಚ್ಚಿನ ತಂಡವನ್ನು ಪ್ರೋತ್ಸಾಹಿಸಲು ಅಮೇರಿಕಾ (ಯುಎಸ್‍ಎ) ನ್ಯೂಜೆರ್ಸಿ ಅಲ್ಲಿನ ಮೆಟ್‍ಲೈಫ್ ಸ್ಟೇಡಿಯಂಗೆ ಕಾಲಿರಿಸಿದ್ದರು.

ಕಳೆದ ಜೂ. 11 ರಿಂದ ಜು. 19 ರ ವರೆಗೆ ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋ ದೇಶಗಳ ಜಂಟಿ ಆತಿಥ್ಯದಲ್ಲಿ ಫಿಫಾ ವಿಶ್ವಕಪ್‍ನ 23ನೇ ಆವೃತ್ತಿ ಆಯೋಜನೆಗೊಂಡಿದ್ದು ಈ ಬಾರಿ ಸುಮಾರು 48 ತಂಡಗಳು ಸ್ಪರ್ಧಿಸಿದ್ದು, ಕಳೆದ ಬಾರಿಯ 64 ಪಂದ್ಯಗಳಿಗೆ ಹೋಲಿಸಿದರೆ ಈ ಬಾರಿ ಒಟ್ಟು 104 ಪಂದ್ಯಗಳು ನಡೆಯುತ್ತಿರುವ ಬಗ್ಗೆ ಬಾರೀ ಕುತೂಹಲಕರವಾಗಿ ವೀಕ್ಷಿಸುತ್ತಿದ್ದ ಶಿವರಾಮ ಭಂಡಾರಿ ಜು.20 ರಂದು ಮುಂಜಾನೆ 12:30 ಗಂಟೆಗೆ ಭಾರತೀಯ ಕಾಲಮಾನದ ಪ್ರಕಾರ (ಐಎಸ್‍ಟಿ) ಜು.19 ರ ತಡರಾತ್ರಿ ನಡೆದ ಅಂತಿಮ ಸುತ್ತಿನ ಸ್ಪರ್ಧೆಯನ್ನು ಖುದ್ಧಾಗಿ ವೀಕ್ಷಿಸಲು ಮೆಟ್‍ಲೈಫ್ ಕ್ರೀಡಾಂಗಣಕ್ಕೆ ಹೆಜ್ಜೆಯನ್ನಿಟ್ಟು ಎಂದಿಗೂ ಮರೆಯಲಾಗದ ಫುಟ್ಬಾಲ್ ಫಿಫಾ ವಿಶ್ವಕಪ್-2026 ಸಂಭ್ರಮ ಪಂದ್ಯಾಟವನ್ನು ವೀಕ್ಷಿಸಿ ಆನಂದಿಸಿದರು.

`ಮೆಟ್ರೋವೆಸ್ಟ್ ಪ್ರಾದೇಶಿಕ ಫ್ಯಾನ್ ಝೋನ್’ಗಳಲ್ಲಿ ಬೃಹತ್ ಜಂಬೋಕ್ರಾನ್ ಪರದೆಗಳ ಮೂಲಕ ಪಂದ್ಯಗಳ ನೇರ ಪ್ರಸಾರ, ಲೈವ್ ಸ್ಟ್ರೀಮಿಂಗ್ ಇದ್ದರೂ ಅಲ್ಲಿನ ಫುಡ್ ಟ್ರಕ್‍ಗಳು, ಬೀರ್ ಗಾರ್ಡನ್‍ಗಳು, ಕರಕುಶಲ ಕಲೆಗಳು ಮತ್ತು ವಿವಿಧ ಮಳಿಗೆಗಳು, ಹತ್ತು ಹಲವು ಮನಾಕರ್ಷಿತ ಲೈವ್ ಚಟುವಟಿಕೆಗಳನ್ನು ಸ್ವತಃ ಅನುಭವಿಸಿ ಆನಂದಿಸಬಹುದಾದ ಫಿಫಾ ವಿಶ್ವಕಪ್-2026 ಸಂಭ್ರಮಕ್ಕೆ ಸಾಕ್ಷಿಯಾದರು.

ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋ ಜಂಟಿಯಾಗಿ ಆಯೋಜಿಸುತ್ತಿರುವ ಈ ಟೂರ್ನಿಯ ಫಿಫಾ ವಿಶ್ವಕಪ್ 2026ರಲ್ಲಿ ದಾಖಲೆಯ 48 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಿ ಅರ್ಜೆಂಟಿನಾ / ಸ್ಪೇನ್ ತಂಡಗಳ ಅಂತಿಮ ಸ್ಪರ್ಧೆಯಲ್ಲಿ ಸ್ಪೇನ್ ವಿಶ್ವವಿಜೇತ ಕಿರೀಟದ ಮಹಾ ಸಮರದಲ್ಲಿ (ಫೈನಲ್) ಪಾಲ್ಗೊಂಡ ತುಳು-ಕನ್ನಡಿಗರೆಣಿಸಿದ ಶಿವರಾಮ ಭಂಡಾರಿ ತನ್ನ ಸ್ನೇಹಿತ (ಮಾಜಿ ಸಂಸದ ರಾಹುಲ್ ಶೆವಾ ಲೆ) ಅವರೊಂದಿಗೆ ಪಾಲ್ಗೊಂಡ ಭಾರತೀಯರಲ್ಲಿ ಓರ್ವರು. ಭಾರತದಲ್ಲಿದ್ದೇ ರಾತ್ರಿವಿಡೀ ಫುಟ್ಬಾಲ್ ಪಂದ್ಯಾಟಗಳನ್ನು ವೀಕ್ಷಿಸಿ ಆನಂದಿಸುತ್ತಿದ್ದ ಶಿವರಾಮ ಭಂಡಾರಿ ಬರೇ ಒಂದೆರಡು ದಿನಗಳ ಸಿದ್ಧತೆ ನಡೆಸಿ ಲಕ್ಷಾಂತರ ಪ್ರೇಕ್ಷಕರ ಮಧ್ಯೆಯೂ ಲೈವ್‍ಮ್ಯಾಚ್ ವೀಕ್ಷಿಸಲು ಮೆಟ್‍ಲೈಫ್ ಸ್ಟೇಡಿಯಂ ಸೇರಿದರು ಎನ್ನಲಾಗಿದೆ.

1984ನೇ ಇಸವಿಯಲ್ಲಿ ನಾಲ್ಕು ವರ್ಷಗಳ ಕಾಲ ಕತಾರ್‍ನ ಆಲ್ ಸಲ್ತ್ ಸ್ಟೇಡಿಯಂನಲ್ಲಿ ಕಟ್ಟಡ ಕಾಮಗಾರಿ ಕೆಲಸ ಮಾಡಿದ್ದ ಶಿವರಾಮ ಭಂಡಾರಿ, ಕಳೆದ 22ನೇ ಆವೃತ್ತಿಯ ಫಿಫಾ ವಿಶ್ವಕಪ್‍ನ್ನು ಕತಾರ್‍ನ ಅದೇ ಲುಸೈಲ್ ಸ್ಟೇಡಿಯಂನಲ್ಲಿ ಮುಖತಃ ವೀಕ್ಷಿಸಿದ್ದು ಅಂದು ಉದ್ಯೋಗಿಯಾಗಿ ಕತಾರ್ ಅನುಭವಿಸಿದ್ದು 2022ರಲ್ಲಿ ಉದ್ಯಮಿಯಾಗಿ ಫುಟ್ಬಾಲ್ ವರ್ಲ್ಡ್‍ಕಪ್ ಪಂದ್ಯಾಟ ಪ್ರತ್ಯಕ್ಷದರ್ಶಿಯಾಗಿ ವೀಕ್ಷಿಸಿದ್ದ ಅದೃಷ್ಟಶಾಲಿ. ಬಾಲ್ಯದಿಂದಲೂ ಫುಟ್ಬಾಲ್‍ನ ಪಾಗಲ್‍ಪ್ರೇಮಿ ಎಂದು ಕರೆಸಿಕೊಂಡವರು. ಮೂರು ದಶಕಗಳ ಹಿಂದೆಯೇ ಕ್ರೀಡಾಪ್ರೇಮಿಗಳ ತಲೆಕೂದಲಲ್ಲಿ ಪಿಫಾ ಚಿಹ್ನೆ ವಿನ್ಯಾಸ ಗೊಳಿಸಿದ್ದ ಶಿವಾ ಭಾರೀ ಜನಮನ್ನಣೆಗೆ ಪಾತ್ರರಾಗಿದ್ದರು. ಇದೀಗ ನೆರೆದ ವಿಶ್ವದ ಹಲವಾರು ದೇಶಗಳ ಕ್ರೀಡಾಭಿಮಾನಿಗಳ ಮಧ್ಯೆಯೂ ಭಾರತೀಯನಾಗಿ ಪಾಲ್ಗೊಂಡು ಭಾರತ ದೇಶದ ರಾಷ್ಟ್ರಾಭಿಮಾನವನ್ನು ಪ್ರದರ್ಶಿಸಿದ ಹಿರಿಮೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *