ರಾಜ್ಯ ಮಟ್ಟದ ಅಬಾಕಸ್ ಮತ್ತು ವೇದಗಣಿತ ಪರೀಕ್ಷೆಯಲ್ಲಿ ಮಾಳ ಗುರುಕುಲ ಮಕ್ಕಳ ಸಾಧನೆ

ಮಾಳ: ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇಲ್ಲಿನ ವಿದ್ಯಾರ್ಥಿಗಳಿಗೆ ಜನರೇಶನ್ ನೆಕ್ಸ್ಟ್ ಇವರ ವತಿಯಿಂದ ರಾಜ್ಯಮಟ್ಟದ ಅಬಾಕಸ್ ಮತ್ತು ವೇದಗಣಿತ ಪರೀಕ್ಷೆಯನ್ನು ನಡೆಸಿದ್ದು ಈ ಪರೀಕ್ಷೆಯಲ್ಲಿ 43 ವಿದ್ಯಾರ್ಥಿಗಳು ಭಾಗವಹಿಸಿದ್ದು ಅದರಲ್ಲಿ ನಾಲ್ಕು ವಿದ್ಯಾರ್ಥಿಗಳು ರಾಂಕ್ ಪಡೆದಿದ್ದು 13 ವಿದ್ಯಾರ್ಥಿಗಳು ಸಮಾಧಾನಕರ ಬಹುಮಾನ ಪಡೆದಿದ್ದು ಸಂಸ್ಥೆಯ ವತಿಯಿಂದ ಪ್ರಶಸ್ತಿ ಪತ್ರ ಮೆಡಲ್ ಮತ್ತು ಫಲಕಗಳನ್ನು ನೀಡಿ ಗೌರವಿಸಲಾಯಿತು.

ಈ ಸಂಸ್ಥೆಯು ಮೂರು ವರ್ಷಗಳಿಂದ ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಅಬಾಕಸ್ ಮತ್ತು ವೇದಗಣಿತ ತರಗತಿಯನ್ನು ನೀಡುತ್ತಾ ಬಂದಿರುತ್ತಾರೆ. ಸಂಸ್ಥೆಯ ನಿರ್ದೇಶಕರಾದ ಗುರುರಾಜ್ ಹೆಗಡೆ ಮತ್ತು ಸಿಬ್ಬಂದಿ ವರ್ಗದವರಿಗೆ ಶಾಲಾ ಆಡಳಿತ ಮಂಡಳಿಯ ಪರವಾಗಿ ಹಾಗೂ ಶಿಕ್ಷಕರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಲಾಯಿತು.

Leave a Reply

Your email address will not be published. Required fields are marked *