ಕಾರ್ಕಳ: ಕ್ರಿಯೇಟಿವ್ ಪುಸ್ತಕ ಮನೆ ವತಿಯಿಂದ ಆಯೋಜಿಸಲಾಗಿರುವ “ಕ್ರಿಯೇಟಿವ್ ಪುಸ್ತಕ ಧಾರೆ-3″ ಮೂಲಕ ಭಾನುವಾರ ಖ್ಯಾತ ಪತ್ರಕರ್ತ ಅಜಿತ್ ಹನುಮಕ್ಕನವರ್ ಕನ್ನಡದ ವಿವಿಧ ಲೇಖಕರ ಪ್ರಸಿದ್ಧ, ಯುವ ಹಾಗೂ ಹಿರಿಯ ಬರಹಗಾರರ “ಹೊಸಪಟ್ಟಣ”, “ಖ್ಯಾತ ಶಿಕ್ಷಣ ಸಿದ್ಧಾಂತಿಗಳು”, “ಪೀಯೂಷಾಮೃತ”, “ಸುಭಾಷಿತ ಸಾಗರ”, “ಬದುಕಿನ ಕನ್ನಡಿಯಲಿ”, “ಭಾವಮುದ್ರೆ”, “ದೇವಯಾನ”, “ತರ್ಕಕ್ಕೆ ನಿಲುಕದ್ದು”, “ಸಮುದ್ರ ಮಾತಾಡಿತು”, “ನಿತ್ಯದ ನೋಟಗಳಿಗೆ ನಿರುತ್ತರ”, “ಅಪ್ಪನ ಅಂಗಡಿ”, “ಜಿಗುರು ಜಿವುಡಿದ ಫೇಸ್ಬುಕ್”, “ಗೆಲುವಿನ ದಾರಿ”, “ನದಿಯಂಚಿನ ನಡಿಗೆ”, “ಜಂದನವ ಕಡಿದು ತೋದೊಡೆ”, “ಜಗತ್ತಿನ ಪ್ರಸಿದ್ದ ಮಕ್ಕಳ ಕಥೆಗಳು”, “ಮೌನ ಈ ಮಳೆಬಿಲ್ಲು”, “ನಂಬಿಕೆ”, “ಗೆಲುವಿನ ಏಣಿ”, “ಅಂತರಂಗ ಯಾನ”, “ಮೌಲ್ಯದರಿವಿನ ಹೊಂಬೆಳಕು”, “ನೀಲಿ”, “ಒಲವೇ ಹಾಡಾಗಿದೆ”, “ಸಾಹಿತ್ಯ ವಿಸ್ಮಯ” ಹಾಗೂ “ರಣರಂಗ” ಕ್ರತಿಗಳು ಸೇರಿದಂತೆ ಒಟ್ಟು 25 ಕನ್ನಡ ಕೃತಿಗಳು ಲೋಕಾರ್ಪಣೆಗೊಳಿಸಿದರು.






ಈ ಸಂದರ್ಭದಲ್ಲಿ ಮಾತನಾಡಿದ ಅಜಿತ್ ಹನುಮಕ್ಕನವರ್ ನನ್ನ ಯಶಸ್ವಿನ ಹಿಂದೆ ನನ್ನ ಪ್ರಾಥಮಿಕ ಶಾಲೆಯಲ್ಲೇ ಪ್ರಾರಂಭವಾದ ಮಾತುಗಾರಿಕೆ, ಬರವಣಿಗೆಗೆ ಶಿಕ್ಷಕರು ನೀಡಿದ ಪ್ರೋತ್ಸಾಹ ಅಪಾರ. ಯಾವುದನ್ನೂ ನಿರ್ಬಂದಿಸುತ್ತೇವೊ ಅವುಗಳಿಗೆ ಜನರು ಅತ್ಯಂತ ಸದಭಿರುಚಿ ತೋರಿಸುತ್ತಾರೆ ಮೊಬೈಲ್ ಅನ್ನೋದು ಬೆಂಕಿ ಪೆಟ್ಟಿಗೆ ತರ ಅದರಿಂದ ದೀಪನೂ ಹಚ್ಚ ಬಹುದು ಮನೆಗೂ ಬೆಂಕಿ ಹಚ್ಚ ಬಹುದು ಆದರೆ ಅದು ಮೂರ್ಖರ ಕೈಗೆ ಸಿಗಬಾರದು ಯಾವುದು ವಸ್ತು ಮೂರ್ಖರ ವಸ್ತುವಾಗಬಾರದು ಅವುಗಳನ್ನು ಬಳಸಿಕೊಳ್ಳುವ ಉದ್ದೇಶ ನಾವು ಬೆಳೆಸುವ ರೀತಿಯಲ್ಲಿದೆ. ಶಿಕ್ಷಣದ ಉದ್ದೇಶ ನಮಗೆ ಸಿಕ್ಕಿರುವ ಸ್ವಾತಂತ್ರ್ಯವನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದನ್ನು ಕಲಿಯುವುದೇ ಶಿಕ್ಷಣ ಎಂದರು.
ಯಶಸ್ಸು ನಿರ್ಧರಿಸುವುದು ಕೇವಲ ಜ್ಞಾನದಿಂದಲ್ಲ ಜ್ಞಾನವನ್ನು ಸಂದರ್ಭಚಿತವಾಗಿ ಬಳಸಿಕೊಳ್ಳುವ ಚಾಕಚಕ್ಯತೆಯಾಗಿದೆ. ಈ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಇಂತಹ ಶಿಕ್ಷಣ ಸಂಸ್ಥೆ ನಿಜಕ್ಕೂ ಪ್ರಶಂಸನೀಯ ಎಂದರು.
ಕ್ರಿಯೇಟಿವ್ ಪುಸ್ತಕ ಧಾರೆ-3: ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ, ಶಾಸಕ ವಿ ಸುನೀಲ್ ಕುಮಾರ್ ಅವರು ಗೂಗಲ್ ಹಾಗೂ ಜೆ ಪಿ ಟಿ ಕೇವಲ ಮಾಹಿತಿಯನ್ನು ನೀಡುತ್ತದೆ. ಪುಸ್ತಕಗಳು ಮಾಹಿತಿ, ಜ್ಞಾನ, ಪ್ರೀತಿ, ದೇಶ ಪ್ರೇಮದ ಜೊತೆಗೆ ಬಾಂದವ್ಯವನ್ನು ಬೆಸೆಯುವ ಕೆಲಸವನ್ನು ಮಾಡುತ್ತದೆ.
ಹಿಂದೆ ಖಡ್ಗ ಕತ್ತಿಗಳಿಂದ ಯುದ್ಧಗಳನ್ನು ಗೆಲ್ಲುತ್ತಿದ್ದರೆ ಈಗ ತಂತ್ರಜ್ಞಾನ ಮೂಲಕ ಯುದ್ಧ ಗೆಲ್ಲುವ ಪ್ರಯತ್ನ ನಡೆಸಿದರೂ ಅವುಗಳು ಬಹುಕಾಲ ಉಳಿಯುವುದಿಲ್ಲ. ಸಾಹಿತ್ಯ, ಜ್ಞಾನ, ಪುಸ್ತಕ ಮೂಲಕ ಗೆಲ್ಲುವ ಯುದ್ಧ ನಿರಂತರ ಗೆಲುವು ಹಾಗೂ ಉಳಿವು ಸಾಧ್ಯ ಎಂದರು. ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಶ್ವಥ್ ಎಸ್. ಎಲ್. ಮಾತನಾಡಿ ಕಳೆದ ಮೂರು ವರ್ಷಗಳಿಂದ ಕ್ರಿಯೇಟಿವ್ ಪುಸ್ತಕ ಮನೆ ಕನ್ನಡ ಸಾಹಿತ್ಯದ ಶ್ರೇಷ್ಠ ಕೃತಿಗಳನ್ನು ಪ್ರಕಟಿಸುವುದರ ಜೊತೆಗೆ ನಾಡಿನ ಹೆಸರಾಂತ ಬರಹಗಾರರು, ಚಿಂತಕರು ಹಾಗೂ ಸಾಹಿತ್ಯಾಸಕ್ತರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮಹತ್ವದ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬಂದಿದೆ. ಅದರ ಮುಂದುವರಿದ ಭಾಗವಾಗಿ ಈ ವರ್ಷದ ಮೂರನೇ ಆವೃತ್ತಿಯ “ಕ್ರಿಯೇಟಿವ್ ಪುಸ್ತಕ ಧಾರೆ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ರಾಜ್ಯಮಟ್ಟದ ಕ್ರಿಯೇಟಿವ್ ಪುಸ್ತಕ ಪ್ರಶಸ್ತಿಯನ್ನು ಕುಂದಾಪುರದ ಲೇಖಕ ಶಶಿಧರ ಹಾಲಾಡಿ ಅವರ “ನದಿದಾಟಿ ಬಂದವರು” ಕೃತಿಗೆ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ್ ರಾವ್, ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ, ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ ಸಾ ಪ ಕಾರ್ಕಳ ತಾಲೂಕು ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ ಸಂದರ್ಭಚಿತವಾಗಿ ಮಾತನಾಡಿದರು.
ವೇದಿಕೆಯಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕಕರುಗಳಾದ ವಿದ್ವಾನ್ ಗಣಪತಿ ಭಟ್, ಡಾ ಗಣನಾಥ್ ಭಟ್, ಅಮೃತ್ ರೈ, ಆದರ್ಶ ಎಂ ಕೆ, ವಿಮಲ್ ರಾಜ್, ಗಣಪತಿ ಕೆ ಎಸ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಾಜ್ಯದ ಅನೇಕ ಹಿರಿಯ ಸಾಹಿತಿಗಳು, ಬರಹಗಾರರು ಹಾಗೂ ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.
