ಉರ್ವ: ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಸಭೆ

ಮಂಗಳೂರು: “ಪೋಷಕರು, ಮಗುವಿನ ಸಮಗ್ರ ಬೆಳವಣಿಗೆಗೆ ಪ್ರೋತ್ಸಾಹ ನೀಡಿದಾಗ ವ್ಯಕ್ತಿತ್ವದ ವಿಕಾಸವಾಗುತ್ತದೆ, ಮಕ್ಕಳನ್ನು ಮಾಧ್ಯಮದಿಂದ ದೂರವಿರಿಸಿ” ಎಂದು ಶಾಲಾ ಸಂಚಾಲಕರು ಮತ್ತು ಉರ್ವ ಇಮ್ಯಾನಿಕ್ ಚರ್ಚ್ ಧರ್ಮ ಗುರುಗಳಾದ ವಂ ಗುರು ಬೆಂಜಮೀನ್ ಪಿಂಟೊರವರು ಉರ್ವ ಚರ್ಚ್ ಸಭಾಂಗಣದಲ್ಲಿ ನಡೆದ ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆ ಶಿಕ್ಷಕ ರಕ್ಷಕ ಸಂಘದ ಸಭೆಯನ್ನು ಉದ್ದೇಶಿಸಿ ದೀಪ ಬೆಳಗಿಸಿ ಉದ್ಘಾಟಿಸುತ್ತಾ ಸಂದೇಶ ನೀಡಿದರು.

ಶಿಕ್ಷಕರಾದ ರಾಜ್ ಕಿರಣ್ ಡಿಕುನ್ಹಾ 2025 – 26ನೇ ಶೈಕ್ಷಣಿಕ ಸಾಲಿನ ಶಾಲಾ ವರದಿಯನ್ನು ವಾಚಿಸಿದರು. ಶಿಕ್ಷಕ ರಕ್ಷಕ ಸಂಘದ ಖರ್ಚು ವೆಚ್ಚಗಳನ್ನು ಖಜಾಂಜಿ ಡಾರ್ವಿನ್ ಕರ್ಕಡ ಮಂಡಿಸಿದರು.
ಈ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವಂ ಗುರು ಅರುಣ್ ವಿಲ್ಸನ್ ಲೋಬೊ ಅವರು ಚಿತ್ರ ಬಿಡಿಸುವಲ್ಲಿ ಕಲಾಕಾರ ಹೃದಯ ಮತ್ತು ಮನಸ್ಸು ಇದ್ದಾಗ ಒಳ್ಳೆಯ ಬೆಳವಣಿಗೆ ಆಗುತ್ತದೆ ಎಂದು ಹೇಳಿದರು.
ಶಿಕ್ಷಕಿಯರಾದ ಪ್ರಮೀಳ ತಾವ್ರೊ ಮತ್ತು ತ್ರಿವೇಣಿ ಶಾಲಾ ನಿಯಮಾವಳಿಗಳನ್ನು ತಿಳಿಸಿದರು. ಶಾಲಾ ಮುಖ್ಯ ಶಿಕ್ಷಕರಾದ ಅಲೋಶಿಯಸ್ ಡಿಸೋಜ ರವರು ಶಾಲೆಯ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ತಿಳಿಸಿಕೊಟ್ಟರು.
2026-27 ಸಾಲಿನ ಶಿಕ್ಷಕ ರಕ್ಷಕ ಸಂಘದ ಸಭೆಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು.

ವೇದಿಕೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಜೊತೆ ಕಾರ್ಯದರ್ಶಿಯಾದ ಶೈಲಶ್ರೀ ಗಂಗೋಲಿ ಪೋಷಕರು, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಶಿಕ್ಷಕಿ ಲವೀನ ಡಿಕುನ್ಹಾ ಮತ್ತು ಶಾಂತಿ ಲೋಬೊ ನಿರೂಪಿಸಿ, ಶಿಕ್ಷಕಿ ರೀಟಾ ಮತ್ತು ವಿಶಿತಾ ಸ್ವಾಗತಿಸಿ, ಪ್ರಮೀಳಾ ಕುಮಾರಿ ಮತ್ತು ತೀರ್ಥರಾಮ್ ಧನ್ಯವಾದ ಅರ್ಪಿಸಿದರು.

Leave a Reply

Your email address will not be published. Required fields are marked *