ಬೆಳ್ಮಣ್: “ಕೇರ್ ಚಾರಿಟೇಬಲ್ ಟ್ರಸ್ಟ್” ಇದರ ಅಧ್ಯಕ್ಷ ಅನಿಲ್ ಮೆಂಡೋನ್ಸ, ಸಂದೇಶ್, ಪ್ರತೀಕ್ ಮತ್ತು ಭಾಸ್ಕರ್ ಇವರು ಕೊಡಮಾಡಿದ ಸುಮಾರು 35 ಸಾವಿರ ಮೌಲ್ಯದ ಪುಸ್ತಕ ಮತ್ತು ಅಧ್ಯಯನ ಸಾಮಾಗ್ರಿಗಳನ್ನು ಕಲ್ಲಮುಂಡ್ಕೂರು ಸ. ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಕೊಡುಗೆಯಾಗಿ ನೀಡಲಾಯಿತು. ಇದರ ಜೊತೆಗೆ ಎಲ್ಲಾ ಮಕ್ಕಳಿಗೆ ಐಡಿ ಗಳನ್ನು ರಾಜೇಶ್ ಅಂಚನ್ ರವರು ಉಚಿತವಾಗಿ ನೀಡಿದರು. ಎಸ್ ಡಿ ಎಮ್ ಸಿ ಸದಸ್ಯ, ದಾನಿ ಹರೀಶ್ ಮಿರಾಂದ ರವರು ಮಧ್ಯಾಹ್ನದ ಊಟದ ಜವಾಬ್ದಾರಿಯನ್ನು ವಹಿಸಿಕೊಂಡರು.

ಎಸ್ಡಿ ಎಂಸಿ ಅಧಕ್ಷರಾದ ವಸಂತ್ ನಾಯ್ಕರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭ. ತಮ್ಮ ಉದ್ಘಾಟನಾ ಭಾಷಣದಲ್ಲಿ ಅವರು ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣವನ್ನು ಪೋಷಕರು ಮನೆಯಲ್ಲಿ ಒದಗಿಸಬೇಕೆಂದು ಕರೆ ನೀಡಿದರು. ಎಸ್ಡಿಯಮ್ ಸಿ ಸದಸ್ಯರು, ಹೆತ್ತವರು ಪೋಷಕರು, ಊರ ಮಹನೀಯರುಗಳು ಅತ್ಯಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು. ಶಾಲಾ ಮುಖ್ಯ ಶಿಕ್ಷಕಿ ಹೇಮಲತಾ ಎಲ್ ಜಿ ಸ್ವಾಗತಿಸಿ, ದಾನಿಗಳನ್ನು ಸನ್ಮಾನಿಸಿದರು. ಯಶೋದಾ ಕಾರ್ಯಕ್ರಮ ನಿರೂಪಿಸಿ, ಶೈಲಾಶ್ರೀ ಸನ್ಮಾನಿತರನ್ನು ಪರಿಚಯಿಸಿದರು. ಸರಿತ ರವರ ವಂದನಾರ್ಪಣೆಯೊಂದಿಗೆ ಸಭಾ ಕಾರ್ಯಕ್ರಮ ಕೊನೆಗೊಂಡಿತು.
