ಜೂನ್ 26 ದಿ. ಗುರುವಪ್ಪ ಬಾಳೆಪುಣಿ ದತ್ತಿ ನಿಧಿ ವಿತರಣೆ

ವರದಿ ರಾಯಿ ರಾಜ ಕುಮಾರ
ಉನ್ನತ ಶಿಕ್ಷಣದ ಆಸೆಯಿದ್ದು ಆರ್ಥಿಕ ದುಸ್ಥಿತಿಯ ಕಾರಣದಿಂದ ಕಷ್ಟದಲ್ಲಿದ್ದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅವರ ಆಸಕ್ತಿಯ ವಿಷಯಗಳಲ್ಲಿ ಉನ್ನತ ಶಿಕ್ಷಣದ ತನಕ ವಿದ್ಯಾರ್ಜನೆಗೈಯಲು ಕಳೆದ 5 ವರ್ಷಗಳಿಂದ ಸಹಾಯ ನೀಡಲಾಗುತ್ತಿದೆ. ಕಾರುಣ್ಯ ವಾರಿಧಿ ಮರಕಡ ಜನ್ಮದಿನದ ಹೆಸರಲ್ಲಿ ಹುಟ್ಟಿಕೊಂಡ ಪರಿಕಲ್ಪನೆ ಅಡಿ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ದತ್ತು ಯೋಜನೆಯಲ್ಲಿ ಶುಲ್ಕ ಪಾವತಿಯಿಂದ ಹಿಡಿದು ಮಕ್ಕಳ ಎಲ್ಲ ಖರ್ಚು ವೆಚ್ಚಗಳನ್ನು ಭರಿಸಲಾಗುತ್ತಿದೆ.

ಈ ವರ್ಷ ಒಟ್ಟು ಆರು ವಿದ್ಯಾರ್ಥಿಗಳಿಗೆ ಸಹಾಯವನ್ನು ನೀಡಲಾಗುತ್ತಿದೆ. ತ್ರಿಷಾ ಕಾಲೇಜಿನ ಧೃತಿ ಕುಂಜತ್ತ ಬೈಲ್, ಕೆನರಾ ಕಾಲೇಜಿನ ಮೇಘ ಸಜಿಪ, ಸಂತ ಅಲೋಶೀಯಸ್ನ ತ್ರಿಷಾ ಪಚ್ಚ ನಾಡಿ, ಕೆನರಾ ಕಾಲೇಜಿನ ಶ್ರೀಜಾ ಶೆಟ್ಟಿ, ಬಿಸಿ ರೋಡಿನ ಶೋಭಿತ, ದಡ್ಡಲ ಕಾಡು ಶಾಲೆಯ ಪ್ರಾಪ್ತಿ, ಕಲ್ಲಡ್ಕ ಶ್ರೀರಾಮ ಪ.ಪೂ. ಕಾಲೇಜಿನ ಶ್ರೇಯ, ವಾಮದಪದವು ಸ ಪ ಪೂ ಕಾಲೇಜಿನ ರಶ್ಮಿತ್. ಹಲವಾರು ಸ್ನೇಹಿತರು, ಉದ್ಯಮಿಗಳ, ಪತ್ರಕರ್ತರ ಸಹಕಾರದಿಂದ ಇಷ್ಟು ದೊಡ್ಡ ಮೊತ್ತ ವಿದ್ಯಾರ್ಥಿಗಳಿಗೆ ತಲುಪಿಸಲು ಸಾಧ್ಯವಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಎಜು ಕಾರುಣ್ಯ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಮೋಹನ್ ದಾಸ್ ಮರಕಡ ತಿಳಿಸಿದರು. ಕಾರ್ಯದರ್ಶಿ ರಮೇಶ್ ಶೆಟ್ಟಿ, ಪ್ರಶಾಂತ್ ಅಬ್ಬೆಟ್ಟು, ದಿನೇಶ್ ನಾಯ್ಕ, ನವೀನ್ ಎಲ್ ಆರ್ ಗಾಂಧಿನಗರ, ಶ್ರೀಷ ಶೆಟ್ಟಿ ಅಬ್ಬೆಟ್ಟು, ಮೇಘ ಸಜೀಪ ಹಾಜರಿದ್ದರು.

Leave a Reply

Your email address will not be published. Required fields are marked *