ಕಾರ್ಕಳ,ಸೆ. 25: ಕಾರ್ಕಳ ದಾನಶಾಲೆಯ ಮಹಾಮಸ್ತಕಾಭಿಷೇಕ ಕಾರ್ಯಾಲಯದಲ್ಲಿ ಸೆ. 25ರಂದು ನಡೆದ, 2027 ರ ಫೆಬ್ರವರಿ 18ರಿಂದ 28 ರ ವರೆಗೆ ನಡೆಯಲಿರುವ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವದ ಮನವಿ ಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.


ಬೈರವರಸರು ಆಳಿದ ಈ ಭೂಮಿ ಸಾಮಾನ್ಯವಾದುದಲ್ಲ. ಇದು ಪವಿತ್ರ ಭೂಮಿಯಾಗಿದ್ದು, ಸೂರ್ಯ, ಚಂದ್ರ, ಭೂಮಿ ಇರುವವರೆಗೂ ಇಲ್ಲಿ ಮಹಾಮಸ್ತಕಾಭಿಷೇಕ ನಡೆಯುತ್ತಿರಬೇಕು. ಪ್ರೀತಿ, ಪ್ರೇಮ ಮತ್ತು ಭಕ್ತಿಭಾವದಿಂದ ಮಹೋತ್ಸವ ಸಫಲವಾಗಿ ನೆರವೇರಲಿ. ಎಲ್ಲರ ಪಾಪದೋಷಗಳು ನಿವಾರಣೆಯಾಗಿ ಆತ್ಮಸಂಕಲ್ಪ ಮೂಡಲಿ ಎಂದು ಪರಮಪೂಜ್ಯ 108 ಏಲಾಚಾರ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಹೇಳಿದರು.
ಕಾರ್ಕಳ ಶ್ರೀ ಜೈನಮಠದ ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾಸ್ವಾಮಿಗಳು ಮಾರ್ಗದರ್ಶನ ನೀಡಿ, ಮೂರ್ತಿಗಳ ರೂಪದಲ್ಲಿ ಪ್ರಕೃತಿಯನ್ನು ಪೂಜಿಸುವ ಪರಂಪರೆ ನಮ್ಮದು. ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕವು ಧಾರ್ಮಿಕ ಆಚರಣೆಯ ಜೊತೆಗೆ ಆತ್ಮಶುದ್ಧಿ ಮತ್ತು ಮಾನವೀಯ ಮೌಲ್ಯಗಳ ಸಂದೇಶವನ್ನು ಸಾರುವ ಮಹೋತ್ಸವವಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಜೈನ ಸಮುದಾಯದ ಹಿರಿಯರಾದ ರತ್ನಾಕರ ರಾಜ ಅರಸು, ಮಹೋತ್ಸವ ಸಮಿತಿಯ ಉಪಾಧ್ಯಕ್ಷ ಅನಂತರಾಜ್ ಪೂವಣಿ, ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಜೈನ್, ಕೋಶಾಧಿಕಾರಿ ಮೋಹನ್ ಪಡಿವಾಳ್ ಹಾಗೂ ವಿವಿಧ ಸಮಿತಿಗಳ ಪ್ರಮುಖರು ಉಪಸ್ಥಿತರಿದ್ದರು.
ಮಹೋತ್ಸವ ಸಮಿತಿಯ ಯಶಸ್ವಿಗೆ ಮನವಿ ಪತ್ರ ಬಿಡುಗಡೆಗೊಳಿಸಲಾಯಿತು.
