ರೋಟರಿ ಕ್ಲಬ್ ನಿಟ್ಟೆ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ನಿಟ್ಟೆ: ರೋಟರಿ ಇಂಟರ್‌ನ್ಯಾಷನಲ್ ಜಿಲ್ಲೆ 3182ರ ವಲಯ-5ರ ರೋಟರಿ ಕ್ಲಬ್ ನಿಟ್ಟೆ ವತಿಯಿಂದ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಇತ್ತೀಚೆಗೆ ನಿಟ್ಟೆಯ ತಾಂತ್ರಿಕ ಮಹಾವಿದ್ಯಾಲಯದ ಸಂಭ್ರಮ ಸಭಾಂಗಣದಲ್ಲಿ ನಡೆಯಿತು.

ಸಮಾರಂಭದಲ್ಲಿ ರೊ. MPHF. ಡಾ. ಆಶಾ ಪಿ. ಹೆಗ್ಡೆ, ಮಾಜಿ ಜಿಲ್ಲಾ ಪೋಲಿಯೋ ಪ್ಲಸ್ ಸಮಿತಿ ಅಧ್ಯಕ್ಷರು, ಅವರು ಪದಗ್ರಹಣಾಧಿಕಾರಿಯಾಗಿ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ 2026–27ನೇ ಸಾಲಿನ ಸಹಾಯಕ ಗವರ್ನರ್ ರೊ. PHF. ಸುರೇಶ್ ನಾಯಕ್ ಕೆ.ಎಸ್. ಹಾಗೂ ವಲಯ ಲೆಫ್ಟಿನೆಂಟ್ ರೊ. ಡಾ. ಕೃಷ್ಣ ಪ್ರಸಾದ್ ಎಸ್. ಭಾಗವಹಿಸಿ, ರೋಟರಿಯ ಸೇವಾ ಚಟುವಟಿಕೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜನಸಾಮಾನ್ಯರಿಗೆ ತಲುಪಿಸುವಂತೆ ಕರೆ ನೀಡಿದರು. ಗೌರವ ಅತಿಥಿಗಳಾಗಿ 2025–26ನೇ ಸಾಲಿನ ಸಹಾಯಕ ಗವರ್ನರ್ ರೊ. ವಿಘ್ನೇಶ್ ಶೆಣೈ ಬಿ. ಹಾಗೂ ವಲಯ ಲೆಫ್ಟಿನೆಂಟ್ ರೊ. ಪ್ರಶಾಂತ್ ಬೆಳಿರಾಯ ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ 2025–26ನೇ ಸಾಲಿನ ಅಧ್ಯಕ್ಷ ರೊ. ಡಾ. ರಘುನಂದನ್ ಕೆ. ಆರ್. ಅವರು ತಮ್ಮ ಅಧಿಕಾರವನ್ನು 2026–27ನೇ ಸಾಲಿನ ಅಧ್ಯಕ್ಷೆ ರೊ. ಶೈಲಜಾ ವಿ. ಶೆಟ್ಟಿ ಹಾಗೂ ಕಾರ್ಯದರ್ಶಿ ರೊ. ಡಾ. ದಿಲೀಪ್ ಕುಮಾರ್ ಕೆ. ಅವರಿಗೆ ಹಸ್ತಾಂತರಿಸಿದರು.
ರೋಟರಿ ಕ್ಲಬ್ ನಿಟ್ಟೆಯ ಸಮಾಜಮುಖಿ ಸೇವಾ ಯೋಜನೆಗಳಡಿ ನಿಟ್ಟೆ ಎಜುಕೇಶನ್ ಟ್ರಸ್ಟ್ ಸಹಯೋಗದಲ್ಲಿ ನಿಟ್ಟೆ ವ್ಯಾಪ್ತಿಯ ವಿವಿಧ ಶಾಲೆಗಳ 900 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈದ ನಿಟ್ಟೆ ಗ್ರಾಮದ ವಿವಿಧ ಶಾಲೆಗಳ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ವಿಶೇಷವಾಗಿ ಸನ್ಮಾನಿಸಿ ಪ್ರಶಸ್ತಿ ಹಾಗೂ ನಗದು ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ನಿಟ್ಟೆ ಕ್ಯಾಂಪಸ್ ನಿರ್ವಹಣೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಪ್ರೊ. ಯೋಗೀಶ್ ಹೆಗ್ಡೆ ಅವರು ಉಪಸ್ಥಿತರಿದ್ದರು.

ನೂತನ ಅಧ್ಯಕ್ಷೆ ರೊ. ಶೈಲಜಾ ವಿ. ಶೆಟ್ಟಿ ಅವರು ಮಾತನಾಡಿ, ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ, ಯುವಜನ ಅಭಿವೃದ್ಧಿ ಹಾಗೂ ಸಮಾಜಮುಖಿ ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ ಕ್ಲಬ್ ಅನ್ನು ಮತ್ತಷ್ಟು ಸಕ್ರಿಯಗೊಳಿಸಲಾಗುವುದು ಎಂದು ತಿಳಿಸಿದರು. ನೂತನ ಕಾರ್ಯದರ್ಶಿ ಡಾ. ದಿಲೀಪ್ ಕುಮಾರ್ ಕೆ. ಅವರು ಕ್ಲಬ್ ಸದಸ್ಯರ ಸಹಕಾರದೊಂದಿಗೆ ವರ್ಷಪೂರ್ತಿ ಅರ್ಥಪೂರ್ಣ ಸೇವಾ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ರೋಟರಿ ಕ್ಲಬ್ ನಿಟ್ಟೆಯ ಸದಸ್ಯರು, ವಿವಿಧ ರೋಟರಿ ಕ್ಲಬ್‌ಗಳ ಪದಾಧಿಕಾರಿಗಳು, ಗಣ್ಯರು ಹಾಗೂ ಸದಸ್ಯರ ಕುಟುಂಬಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *