ಪಡು ಮಾರ್ನಾಡು ಗ್ರಾಮದ ಅಮನಬೆಟ್ಟು ಯುವಕ ಮಂಡಲದಲ್ಲಿ ಶಿಕ್ಷಣ ಸಂಬಂಧಿ ವಿಶೇಷ ಮಾಹಿತಿ ಕಾರ್ಯಕ್ರಮ

ಮೂಡುಬಿದಿರೆ: ಮೂಡುಬಿದಿರೆ ತಾಲೂಕಿನ ಪಡು ಮಾರ್ನಾಡು ಗ್ರಾಮದ ಅಮನಬೆಟ್ಟು ಯುವಕ ಮಂಡಲದಲ್ಲಿ ಸ್ಥಳೀಯ ಯುವಕ, ಯುವತಿ ಮಂಡಲದ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಬಂಧಿ ವಿಶೇಷ ಮಾಹಿತಿ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬೆಂಗಳೂರು ಸ್ಪಾರ್ಕ್ ಅಕಾಡೆಮಿಯ ತರಬೇತುದಾರ, ಸಂಪನ್ಮೂಲ ವ್ಯಕ್ತಿ, ಕಾರ್ಯನಿರತ ಪತ್ರಕರ್ತ ರಾಯಿ ರಾಜಕುಮಾರ್ ರು ಶಿಕ್ಷಣದಲ್ಲಿ ಮಹಿಳೆಯರ ಮುಖ್ಯ ಪಾತ್ರದ ಬಗ್ಗೆ ತಿಳಿಸುತ್ತಾ ಸೃಜನಶೀಲ ಮನಸ್ಸನ್ನು ಬೆಳೆಸಿಕೊಂಡಂತೆ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ.

ಸಾಧಿಸಬೇಕಾದುದನ್ನು ಕೌಶಲ್ಯ ಯುಕ್ತವಾಗಿ ಶಿಸ್ತು, ಸಂಯಮ, ಸರಳ ಬದುಕು, ಉನ್ನತ ಜ್ಞಾನ ದೊಂದಿಗೆ ಬೆಳೆಸಿಕೊಂಡಲ್ಲಿ ಯೋಚಿಸಿ, ಯೋಜಿಸಿ, ಸಾಧಿಸಿ, ಬೆಳಗಲು ಎಲ್ಲರಿಂದಲೂ ಸಾಧ್ಯ ಇದೆ ಎಂದು ಹಲವಾರು ಉದಾಹರಣೆಗಳ ಮೂಲಕ ಮನದಟ್ಟು ಮಾಡಿದರು.
ಅಮ್ಮನಬೆಟ್ಟು ಪ್ರಗತಿ ಬಂದು ಒಕ್ಕೂಟದ ಸದಸ್ಯರುಗಳು, ಯುವಕ ಯುವತಿ ಮಂಡಲದ ಪದಾಧಿಕಾರಿಗಳು, ಜ್ಞಾನದೀಪ ಯೋಜನೆಯ ಫಲಾನುಭವಿಗಳು, ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು. ಅಮ್ಮನಬೆಟ್ಟು ಮುಖ್ಯ ಶಿಕ್ಷಕಿ ಹೇಮಲತಾ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷ ಸುರೇಂದ್ರ ಪೂಜಾರಿ, ಶಿಕ್ಷಕಿ ಸುನಿತಾ ವೇದಿಕೆಯಲ್ಲಿ ಹಾಜರಿದ್ದರು.

ಧರ್ಮಸ್ಥಳ ಜ್ಞಾನ ವಿಕಾಸ ಯೋಜನೆಯ ಅಧಿಕಾರಿ ವಿನುತ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಉಶಾಕಿರಣ್ ಕಾರ್ಯಕ್ರಮ ನಿರ್ವಹಿಸಿದರು. ಯೋಜನೆಯ ಸಂಯೋಜಕಿ ವಸಂತಿ ವಂದಿಸಿದರು.

Leave a Reply

Your email address will not be published. Required fields are marked *