ಜೋಯ್ ಕ್ರಶರ್ಸ್ ಮಾಲಕ ಸಿಎಮ್ ಜೋಯ್ ನಿಧನಕ್ಕೆ ಉದಯ ಶೆಟ್ಟಿ ಮುನಿಯಾಲು ಸಂತಾಪ

ಕಾರ್ಕಳ: ಜೋಯ್ ಕ್ರಶರ್ಸ್ ಸಂಸ್ಥೆಯ ಮಾಲಕರು, ಆತ್ಮೀಯರಾಗಿದ್ದ ಹಿರಿಯ ಉದ್ಯಮಿಗಳಾದ ಸಿಎಂ ಜೋಯ್ ಅವರ ನಿಧನದಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಧಾರ್ಮಿಕ ಸಾಂಸ್ಕೃತಿಕ ಕ್ಷೇತ್ರಕ್ಕೆ ಅವರು ನೀಡುತ್ತಿದ್ದ ಸಹಕಾರವು ಗಣಣೀಯವಾದುದು.

ಉದ್ಯಮ ಕ್ಷೇತ್ರದ ಸಾಧನೆಯ ಜೊತೆಗೆ ಸಮಾಜಮುಖಿ ಕೆಲಸಗಳಿಗೆ ಅವರ ಸ್ಪಂದನೆಯು ಅನುಕರಣೀಯ. ಅಗಲಿದ ದಿವ್ಯಾತ್ಮಕ್ಕೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತೇನೆ ಹಾಗೂ ಅವರ ಕುಟುಂಬ ವರ್ಗಕ್ಕೆ, ಬಂದು ಮಿತ್ರರಿಗೆ, ಅಭಿಮಾನಿ ಬಳಗಕ್ಕೆ ದುಃಖವನ್ನು ಭರಿಸುವ ಶಕ್ತಿ ಸಿಗುವಂತಾಗಲಿ ಎಂದು ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಅವರು ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *