ದಸರೆಯಲಿ ಮೈಸೂರು, ಮೈಸೂರಲಿ ದಸರಾ – Poem by Chidananda Mallikarjuna Kallyani

 ಕವಿ ಚಿಮಕ

ದಸರಾ ದಸರಾ, ಮೈಸೂರು ದಸರಾ!

ಸುಂದರ ದಸರಾ, ಅತಿ ಸುಂದರ ದಸರಾ!

ಹೃದಯದಲ್ಲಿ ಹೂವಾಗಿ ಅರಳುವ ಪ್ರೀತಿಯ ದಸರಾ!

ಚಾಮುಂಡಿ ತಾಯಿಯ ಪುಣ್ಯದ ಕಾಣಿಕೆ — ಮೈಸೂರು ದಸರಾ! ||೧||

ಹರುಷವ ತಂದಿತು, ಮನವನು ಕುಣಿಸಿತು,

ಜನಮನ ಸೆಳೆದು, ವೈಭವ ಮೆರೆದಿತು;

ದೀಪದ ಬೆಳಕಲಿ ಮೈಸೂರು ಹೊಳೆಯಿತು,

ಸಪ್ತ ಕಡಲಾಚೆಯ ಜಗವನ್ನೆ ಸೆಳೆಯಿತು — ಮೈಸೂರು ದಸರಾ! ||೨||

ಚಿನ್ನದ ಅಂಬಾರಿ ಹೊತ್ತು ಗಜರಾಜ ನಡೆದು,

ಯದುವಂಶದ ವೈಭವ ಕಣ್ಮುಂದೆ ಬಂದು;

ಜಂಬೂಸವಾರಿಯಲಿ ಕರುನಾಡು ಹರ್ಷದಿ ಕುಣಿದು,

ತಾಯಿ ಚಾಮುಂಡೇಶ್ವರಿಯ ಕೃಪೆಯಿಂದ ಮೆರೆದಿತು — ಮೈಸೂರು ದಸರಾ! ||೩||

ಮನೆಮನೆಯ ಬಾಗಿಲಲಿ ಹಬ್ಬದ ಹಣತೆ ನಗುತಿರಲು,

ಬೀದಿ ಬೀದಿಗಳಲ್ಲಿ ಬಣ್ಣದ ದೀಪಗಳು ಮಿನುಗಿರಲು;

ತಲೆಮಾರುಗಳ ನೆನಪಿನಲಿ ಹೊಸದೊಂದು ಪುಟ ತೆರೆದು,

ಹೃದಯದಲ್ಲಿ ಚಿರಕಾಲ  ಉಳಿಯಿತು— ಮೈಸೂರು ದಸರಾ! || ೪||

ಚಾಮುಂಡಿ ಬೆಟ್ಟದಲಿ ಭಕ್ತಿಯ ಗೀತೆ ಮೊಳಗಿರಲು,

ಅರಮನೆಯ ಅಂಗಳದಿ ಕಲೆಯ ಕಂಪು ತುಂಬಿರಲು;

ದಸರೆಯ ಸೊಬಗು ಕಣ್ಣಲಿ ತುಂಬಿ ಜಗಮಗಿಸುತಿರಲು,

ಹೃದಯವ ಸ್ಪರ್ಶಿಸಿ ಮನವನು ಗೆದ್ದಿತು — ಮೈಸೂರು ದಸರಾ! ||೫||

Leave a Reply

Your email address will not be published. Required fields are marked *