ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಭೇಟಿಯಾದ ಡಾ|ಕೆ.ಸಿ. ನಾರಾಯಣ ಗೌಡ ನಿಯೋಗ

ಮುಂಬಯಿ: ಕರ್ನಾಟಕ ರಾಜ್ಯದ ಮಾಜಿ ಕ್ಯಾಬಿನೆಟ್ ಸಚಿವ ಡಾ| ಕೆ.ಸಿ. ನಾರಾಯಣ ಗೌಡ ಇವರು ಇಂದಿಲ್ಲಿ ಮಂಗಳವಾರ ಮುಂಬಯಿ ಮಂತ್ರಾಲಯದಲ್ಲಿ (ಮಹಾರಾಷ್ಟ್ರ ರಾಜ್ಯ ಸರಕಾರದ ಅಧೀಕೃತ ಸಚಿವಾಲಯ) ಇಲ್ಲಿ ಮಹಾರಾಷ್ಟ್ರದ ಸರ್ಕಾರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಇವರನ್ನು ಭೇಟಿಯಾದರು.

ಮಹಾರಾಷ್ಟ್ರ ಒಕ್ಕಲಿಗರ ಸಂಘದ ಭವನಕ್ಕೆ ನಿವೇಶನ ಒದಗಿಸುವ ಕುರಿತು ಚರ್ಚೆ ನಡೆಸಿ ಇಲ್ಲಿನ ಒಕ್ಕಲಿಗರ ಸಮುದಾಯದ ಸೇವಾ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ನವಿ ಮುಂಬಯಿಯಲ್ಲಿನ ಸಿಡ್ಕೋ ಸಂಬಂಧಿತ ನಿವೇಶನ ಒದಗಿಸುವಂತೆ ಮನವಿ ಸಲ್ಲಿಸಲಾಯಿತು. ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು, ಶೀಘ್ರದಲ್ಲೇ ನವಮುಂಬಯಿಯಲ್ಲಿ ಸಂಘಕ್ಕೆ ಸೂಕ್ತ ನಿವೇಶನ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಒಕ್ಕಲಿಗರ ಸಂಘ ಮಹಾರಾಷ್ಟ್ರ ಇದರ ನಿಕಟಪೂರ್ವ ಅಧ್ಯಕ್ಷ ಜಿತೇಂದ್ರ ಗೌಡ, ಹಾಲಿ ಗೌರವ ಪ್ರಧಾನ ಕಾರ್ಯದರ್ಶಿ ಗಂಗಾಧರ ಎನ್. ಗೌಡ ಹಾಗೂ ಬಿಜೆಪಿ ಧುರೀಣ ಮೋಹನ್ ಗೌಡ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *