‘25ನೇ ಯುವ ಸಾಂಸ್ಕೃತಿಕ ಉತ್ಸವ’ ಆಳ್ವಾಸ್ ತಾಂತ್ರಿಕ ಮಾಹಾವಿದ್ಯಾಲಯ ನಾಲ್ಕನೇ ಸ್ಥಾನ

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಟ್ಟ ಕಾಲೇಜುಗಳ ‘25ನೇ ಯುವ ಸಾಂಸ್ಕೃತಿಕ ಉತ್ಸವ’ ದಲ್ಲಿ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯ ನಾಲ್ಕನೇ ಸ್ಥಾನ ಪಡೆಯಿತು.

ರಾಜ್ಯದ ವಿವಿಧ ಭಾಗಗಳಿಂದ ಸುಮಾರು 160ಕ್ಕೂ ಹೆಚ್ಚು ತಾಂತ್ರಿಕ ಕಾಲೇಜುಗಳು ಭಾಗವಹಿಸಿದ್ದು, ವಿದ್ಯಾರ್ಥಿಗಳು ತಮ್ಮ ಸಾಂಸ್ಕೃತಿಕ ಪ್ರತಿಭೆಯನ್ನು ಅನಾವರಣಗೊಳಿಸಿದರು. ಉತ್ಸವದ ಅಂಗವಾಗಿ ಮೆರವಣಿಗೆ, ಸಂಗೀತ, ನಾಟಕ, ಕಲಾ ಸ್ಪರ್ಧೆಗಳು ಸೇರಿದಂತೆ ಹಲವು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು.

ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಮೆರವಣಿಗೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಪೌರಾತ್ಯ ಸಂಗೀತದಲ್ಲಿ ದ್ವಿತೀಯ ಸ್ಥಾನ, ಬೆಸ್ಟ್ ಔಟ್ ಆಫ್ ವೇಸ್ಟ್‍ನಲ್ಲಿ ದ್ವಿತೀಯ ಸ್ಥಾನ, ಕ್ಲೇ ಮಾಡೆಲಿಂಗ್‍ನಲ್ಲಿ ದ್ವಿತೀಯ ಸ್ಥಾನ, ಏಕಾಂಕ ನಾಟಕಕ್ಕೆ ಕಂಚಿನ ಪದಕ ಪಡೆದರೆ, ಕಿರು ಪ್ರಹಸನದಲ್ಲಿ ನಾಲ್ಕನೇ ಸ್ಥಾನ ಪಡೆದು ಸಮಗ್ರ ನಾಲ್ಕನೇ ಸ್ಥಾನ ಪಡೆಯಿತು. ವಿದ್ಯಾರ್ಥಿಗಳನ್ನು ಡಾ. ಎಂ. ಮೋಹನ ಆಳ್ವ, ಟ್ರಸ್ಟಿ ವಿವೇಕ್ ಆಳ್ವ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *