2027 ಜನವರಿ 23ರಂದು ಕುತ್ತಾರಿನಲ್ಲಿ 30ನೇ ವರ್ಷದ ವೀರರಾಣಿ ಅಬ್ಬಕ್ಕ ಉತ್ಸವ – ದಿನಕರ ಉಳ್ಳಾಲ್

ಮಂಗಳೂರು: ಇತ್ತೀಚೆಗೆ ನಡೆದ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಸಭೆಯಲ್ಲಿ 2026-27ರ 30ನೇ ವರ್ಷದ ವೀರರಾಣಿ ಅಬ್ಬಕ್ಕ ಉತ್ಸವವನ್ನು 2027 ಜನವರಿ 23ರಂದು ಕುತ್ತಾರಿನ ರಾಜರಾಜೇಶ್ವರಿ ಹಾಲ್‍ನಲ್ಲಿ ನಡೆಸುವುದೆಂದು ತೀರ್ಮಾನಿಸಲಾಯಿತು.

ಅಬ್ಬಕ್ಕ ಉತ್ಸವದಲ್ಲಿ ಪ್ರತಿವರ್ಷದಂತೆ ಈ ಸಲವೂ ವಂದನಾ ಕಾರ್ಯಕ್ರಮ, ಉದ್ಘಾಟನಾ ಸಮಾರಂಭ, ಬಹುಭಾಷಾ ಕವಿಗೋಷ್ಠಿ , ತುಳು ಸಾಂಸ್ಕೃತಿಕ ಕಾರ್ಯಕ್ರಮ, ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮ, ಬ್ಯಾರಿ ಕಾರ್ಯಕ್ರಮ, ಕೊಂಕಣಿ ಕಾರ್ಯಕ್ರಮ, ನಾಟಕ, ಯಕ್ಷಗಾನ ಹಾಗೂ ಸಮಾರೋಪ ಸಮಾರಂಭದಲ್ಲಿ ಇಬ್ಬರು ಮಹಿಳೆಯರಿಗೆ ಅಬ್ಬಕ್ಕ ಪ್ರಶಸ್ತಿ ನೀಡಲಾಗುವುದು ಎಂದು ಅಬ್ಬಕ್ಕ ಉತ್ಸವ ಸಮಿತಿಯ ಅಧ್ಯಕ್ಷರಾದ ದಿನಕರ ಉಳ್ಳಾಲ್‍ರವರು ಸಭೆಯಲ್ಲಿ ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕೆ.ಜಯರಾಮ ಶೆಟ್ಟಿಯವರು ಮಾತನಾಡಿ ಕಳೆದ 30 ವರ್ಷಗಳಿಂದ ಅಬ್ಬಕ್ಕ ಉತ್ಸವ ಸಮಿತಿಯು ಪೋರ್ಚುಗೀಸರ ವಿರುದ್ಧ ಹೋರಾಡಿದ ಕೆಚ್ಚೆದೆಯ ರಾಣಿ ಅಬ್ಬಕ್ಕಳ ಹೆಸರನ್ನು ದೇಶವ್ಯಾಪಿ ಪಸರಿಸುವ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು.
ಈ ಸಭೆಯಲ್ಲಿ ಸಮಿತಿಯ ಗೌರವ ಉಪಾಧ್ಯಕ್ಷರಾದ ಸದಾನಂದ ಬಂಗೇರ, ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ, ಕೋಶಾಧಿಕಾರಿ ಆನಂದ ಕೆ ಅಸೈಗೋಳಿ, ಉಪಾಧ್ಯಕ್ಷರಾದ ದೇವಕಿ ಉಳ್ಳಾಲ್ ಹಾಗೂ ಪದಾಧಿಕಾರಿಗಳಾದ ರಾಘವ ಡಿ.ಎನ್, ಮಾಧವ ಉಳ್ಳಾಲ್, ಪ್ರವೀಣ್ ಕುಮಾರ್, ನಾಗೇಶ್ ಗಟ್ಟಿ ಮೇಲ್ಮನೆ, ಶಶಿಕಲಾ ಗಟ್ಟಿ, ಅನುಪಮ ಸಿ, ಮಾಧವಿ ಉಳ್ಳಾಲ್, ಶಶಿಕಾಂತಿ, ರಾಜೀವಿ ಕೆಂಪುಮಣ್ಣು, ಸತ್ಯವತಿ ಜೆ.ಕೆ, ಸರೋಜಾ ಕುಮಾರಿ, ಸ್ವಪ್ನಾ, ಲತಾ ತಲಪಾಡಿ, ಜಯಶ್ರೀ ಕೆ, ನಾಗರತ್ನ ಗಟ್ಟಿ, ಹೇಮ ಪ್ರವೀಣ್, ಶೋಭಾ ವಸಂತ್, ಮಮತಾ, ಚಂದ್ರಕಲಾ, ಸುರೇಖಾ ಆಳ್ವ, ಕಸ್ತೂರಿ, ಡಾ. ಭಾರತಿ ಪಿಲಾರ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *