ಧರ್ಮಸ್ಥಳದ ಭಕ್ತರಿಂದ ನೇತ್ರಾವತಿ ನದಿಗೆ ಬಾಗಿನ ಅರ್ಪಣೆ

ಉಜಿರೆ: ಧರ್ಮಸ್ಥಳದಲ್ಲಿ ಸ್ನಾನಘಟ್ಟದ ಬಳಿ ನೇತ್ರಾವತಿ ನದಿ ತುಂಬಿ ಹರಿಯುತ್ತಿದ್ದು ಪರಮಭಕ್ತರಾದ ಹಾಸನದ ಎಚ್.ವೈ. ಸೋಮಶೇಖರ್ ಕುಟುಂಬ ಸಮೇತರಾಗಿ ಹಾಗೂ ತಮ್ಮ ಆತ್ಮೀಯ ಬಳಗದವರೊಂದಿಗೆ ಸೋಮವಾರ ಧರ್ಮಸ್ಥಳಕ್ಕೆ ಬಂದು ನೇತ್ರಾವತಿ ಸ್ನಾನಘಟ್ಟದಲ್ಲಿ ಶ್ರದ್ಧಾ-ಭಕ್ತಿಯಿಂದ ಬಾಗಿನ ಅರ್ಪಿಸಿದರು.

ಇವರು ಧರ್ಮಸ್ಥಳದ ಭಕ್ತರಾಗಿದ್ದು ವರ್ಷದಲ್ಲಿ ಅನೇಕ ಬಾರಿ ಧರ್ಮಸ್ಥಳಕ್ಕೆ  ಬಂದು ಸೇವೆ ಮಾಡುತ್ತಿದ್ದಾರೆ. ಹಾಸನ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಚಾಲಕಿ ಹಾಗೂ ಜನಜಾಗೃತಿ ವೇದಿಕೆಯ ಸದಸ್ಯರಾದ ಕಾಂಚನಮಾಲ, ನವಜೀವನ ಸಮಿತಿಯ ಸದಸ್ಯರು, ಕಲಾವಿದರು ಹಾಗೂ ಶೌರ್ಯ ತಂಡದ ಮಹಿಳೆಯರು ಕೂಡಾ ಜೊತೆಯಲ್ಲಿದ್ದರು. ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಉಪಸ್ಥಿತರಿದ್ದು ಸಹಕರಿಸಿದರು.

Leave a Reply

Your email address will not be published. Required fields are marked *