“ಪಾವ್ಸಾಡಿ” ಕೊಂಕಣಿ ಭಾಷಾ ಸ್ಪರ್ಧೆಗಳು

ಮಂಗಳೂರು: ಜಿ ಎಸ್ ಬಿ ಸೇವಾ ಸಂಘದ ವತಿಯಿಂದ ದಿವಂಗತ ಕೊಂಕಣಿ ಶಬ್ದ ರತ್ನಾಕರ ಮಂದರಕೆ ಮಾಧವ ಪೈ ಸ್ಮರಣಾರ್ಥ, ವಿದ್ಯಾರ್ಥಿಗಳಿಗೆ ಹಾಗೂ ಹಿರಿಯರಿಗೆ ಮಳೆಗಾಲವನ್ನು ಸಂಭ್ರಮಿಸುವ “ಪಾವ್ಸಾಡಿ” ಕೊಂಕಣಿ ಭಾಷಾ ಸ್ಪರ್ಧೆಗಳು ಸುಜೀರ ಸಿ ವಿ ನಾಯಕ ಸಭಾಗೃಹದಲ್ಲಿ ನೆರವೇರಿದವು.

ಯೂನಿವರ್ಸಿಟಿ ಕಾಲೇಜು ಮಂಗಳೂರು ಇದರ ಪ್ರಾಂಶುಪಾಲ ಡಾ. ಜಯವಂತ ನಾಯಕ ಮುಖ್ಯ ಅತಿಥಿಗಳಾಗಿದ್ದರು. “ನಾಲ್ಕು ಮಂದಿ ಏನು ಹೇಳುತ್ತಾರೆ ಎಂಬುವುದನ್ನು ಮರೆತು ನಮ್ಮ ಮನಸ್ಸಿಗೆ ಒಪ್ಪುವ ಕೆಲಸ ಮಾಡುವತ್ತ ಮುಂದಿನ ಪೀಳಿಗೆ ಕಾರ್ಯಗತವಾಗಬೇಕು” ಎಂದು ಅವರು ನುಡಿದರು. ಮಾಧವ ಪೈ ಅಂತಹ ಅನೇಕ ಮಹನೀಯರು ಕೊಂಕಣಿ ಭಾಷೆಯ ಅಭಿವೃದ್ಧಿಗಾಗಿ ನಿಸ್ವಾರ್ಥ ಸೇವೆ ನೀಡಿರುತ್ತಾರೆ. ಅವರ ಪ್ರಯತ್ನ ಸಫಲವಾಗ ಬೇಕಾದರೆ ನಾವೆಲ್ಲ ಮಾತೃಭಾಷೆ ಕೊಂಕಣಿಯ ಸೇವೆ ಮಾಡಬೇಕಾಗಿದೆ. ಸೇವಾ ಸಂಘ ಇಂತಹ ಸ್ಪರ್ಧೆಗಳನ್ನು ನಡೆಸಿರುವುದು ಶ್ಲಾಘನೀಯ ಎಂದು ಅವರು ಹೇಳಿದರು. ವಿದ್ಯಾರ್ಥಿಗಳಿಗೆ ಬಣ್ಣ ತುಂಬುವ, ಕವಿತಾ ವಾಚನ, ಭಾಷಣ, ಏಕಪಾತ್ರಾಭಿನಯ, ಲೇಖನ ಸ್ಪರ್ಧೆಗಳು ಜರುಗಿದವು. ಮುಕ್ತ ವಿಭಾಗದಲ್ಲಿ ಕೂಡಾ ಕವಿತಾ ವಾಚನ, ಭಾಷಣ, ಏಕಪಾತ್ರಾಭಿನಯ, ಲೇಖನ ಸ್ಪರ್ಧೆಗಳು ಜರುಗಿದವು. ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದ ರವೀಂದ್ರ ಪೈ ಹಾಗೂ ಸುರೇಂದ್ರ ಪೈ ಶುಭ ಹಾರೈಸಿದರು.

ಸಂಘದ ವತಿಯಿಂದ ಪ್ರತಿ ಬುಧವಾರ ನಡೆಯುವ ಕೊಂಕಣಿ ವಾಚನ ಸಂಘದ ಸದಸ್ಯರಿಗಾಗಿ ಜರಗಿದ ಕಥಾ ಸ್ಪರ್ಧೆಯ ಪ್ರಥಮ ಬಹುಮಾನ ವಿಜೇತರಾದ ಮಂಗಳಾ ಭಟ್ ಮತ್ತು ವಿದ್ಯಾ ಪೈ ಹಾಗೂ ದ್ವಿತೀಯ ಬಹುಮಾನ ವಿಜೇತರಾದ ರಾಧಿಕಾ ಪೈ ಮತ್ತು ವೆಂಕಟೇಶ್ ಎನ್ ಬಾಳಿಗಾ ಅವರಿಗೆ ಬಹುಮಾನ ವಿತರಿಸಲಾಯಿತು. ಇದೇ ವೇಳೆ ವಾಚನ ಸಂಘದ ಎಲ್ಲಾ ಸದಸ್ಯರಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಅಧ್ಯಕ್ಷೀಯ ಭಾಷಣ ಮಾಡಿದ ಸಂಘದ ಅಧ್ಯಕ್ಷ ಡಾ. ಕಸ್ತೂರಿ ಮೋಹನ್ ಪೈ ಮಾತನಾಡುತ್ತಾ ಮಾತೃಭಾಷೆ ಕೊಂಕಣಿ ಹಾಗೂ ನಮ್ಮ ವಿಶಿಷ್ಟ ಸಂಸ್ಕೃತಿಯ ಬಗ್ಗೆ ನಾವೆಲ್ಲಾ ಕಾಳಜಿ ವಹಿಸಬೇಕು ಎಂದು ಕರೆ ನೀಡಿದರು. ಉಷಾ ಮೋಹನ ಪೈ ಬಹುಮಾನಗಳನ್ನು ಪ್ರಾಯೋಜಿಸಿದ್ದರು.
“ಪಾವ್ಸಾಡಿ” ಸ್ಪರ್ಧೆಗಳ ಸಂಚಾಲಕ ಡಾ. ಏ. ರಮೇಶ ಪೈ ಸ್ವಾಗತಿಸಿದರು. ರಾಧಿಕಾ ಪೈ ಪ್ರಾರ್ಥಿಸಿದರು. ಎಂ. ಆರ್. ಕಾಮತ್
ವಂದಿಸಿದರು. ಸುಚಿತ್ರಾ ಶೆಣೈ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಕಾರ್ಯಕಾರಿ ಮಂಡಳಿ ಸದಸ್ಯರಾದ ಜಿ ಎಂ ಪ್ರಭು, ಕುಂಬ್ಳೆ
ನರಸಿಂಹ ಪ್ರಭು, ಅರವಿಂದ ಆಚಾರ್ಯ, ಮೋಹನದಾಸ ಪೈ, ಬಿ. ಆರ್. ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಹುಮಾನ ವಿಜೇತರು
ಬಣ್ಣ ತುಂಬುವ ಸ್ಪರ್ಧೆ
3 – 5 ತರಗತಿ
ಪ್ರಥಮ – ಅಪರ್ಣ ಎಸ ವಾಗ್ಲೆಕರ್
ದ್ವಿತೀಯ – ಅನಿ ಎಂ ಜಿ.
ಸಮಾಧಾನಕರ – ರಿದ್ಧಿ ಜಿ. ಮಲ್ಯ ಮತ್ತು ದೀಕ್ಷಿತ್ ಪೈ
6 – 8 ತರಗತಿ
ಪ್ರಥಮ – ನಿಧಿ ಸುದರ್ಶನ್
ದ್ವಿತೀಯ – ಸುಶಾಂತಿ ಜೆ.
ಸಮಾಧಾನಕರ – ಬಿ. ಚಿನ್ಮಯಿ ಶೆಣೈ ಮತ್ತು ಎಸ. ವಾಂಶಿಕ ಭಟ್

ಪ್ರಭಂದ ಸ್ಪರ್ಧೆ
ವಿದ್ಯಾರ್ಥಿ ವಿಭಾಗ
ಪ್ರಥಮ – ದೇವಕಿ ಪ್ರಭು
ದ್ವಿತೀಯ – ಅಮೋಘಾ ಪೈ
ಸಮಾಧಾನಕರ – ಶರಷ್ಟಿ ಪಡುಬಿದ್ರಿ ಭಟ್ , ಸೌಜನ್ಯ ಎಸ. ಪ್ರಭು
ಮುಕ್ತ ವಿಭಾಗ
ಪ್ರಥಮ – ಪ್ರತಿಮಾ ನಾಯಕ
ದ್ವಿತೀಯ – ಮೇಘನಾ ಕಾಮತ
ಸಮಾಧಾನಕರ – ಪದ್ಮಿನಿ ಪೈ

ಕವಿತಾ ವಾಚನ
ವಿದ್ಯಾರ್ಥಿ ವಿಭಾಗ
ಪ್ರಥಮ – ಅಶ್ವಿನಿ
ದ್ವಿತೀಯ – ಸ್ವನಿಕ ಕಾಮತ
ಸಮಾಧಾನಕರ – ವೈಷ್ಣವಿ ಪೈ

ಮುಕ್ತ ವಿಭಾಗ
ಪ್ರಥಮ – ವಿಮಲಾ ಕಾಮತ
ದ್ವಿತೀಯ – ಮರೋಳಿ ಸಬಿತಾ ಕಾಮತ
ಸಮಾಧಾನಕರ – ಭಾಗ್ಯಶ್ರೀ ಪ್ರಭು
ಏಕಪಾತ್ರಾಭಿನಯ:
ವಿದ್ಯಾರ್ಥಿ ವಿಭಾಗ
ಪ್ರಥಮ – ಪ್ರಣತಿ ನಾಯಕ
ದ್ವಿತೀಯ – ವೇದಿಕಾ ಪ್ರಭು
ಮುಕ್ತ ವಿಭಾಗ:
ಪ್ರಥಮ – ಪ್ರಾಜಕ್ತ ನಾಯಕ

ದ್ವಿತೀಯ – ಮರೋಳಿ ಸಬಿತಾ ಕಾಮತ
ಸಮಾಧಾನಕರ – ವೈಷ್ಣವಿ ಜಿ. ಪೈ
ಭಾಷಣ ಸ್ಪರ್ಧೆ
ವಿದ್ಯಾರ್ಥಿ ವಿಭಾಗ
ಪ್ರಥಮ =- ವೇದಿಕಾ ಪ್ರಭು
ದ್ವಿತೀಯ ಲಿಖಿತಾ ಶೆಣೈ
ಸಮಾಧಾನಕರ – ಕಾಮಾಕ್ಷಿ ಕಾಮತ
ಮುಕ್ತ ವಿಭಾಗ
ಪ್ರಥಮ – ವೈಷ್ಣವಿ ಪೈ
ದ್ವಿತೀಯ – ಪ್ರಜಾಕ್ತ ನಾಯಕ
ಸಮಾಧಾನಕರ – ಶ್ರೀಲಕ್ಷ್ಮಿ ಕಾಮತ

Leave a Reply

Your email address will not be published. Required fields are marked *