ಅಜೆಕಾರು, ಪದ್ಮನಗರ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಡುಪಿ ಜಿಲ್ಲೆ ಹಾಗೂ ಎಂ ಜಿ ಎಂ ಕಾಲೇಜು ಉಡುಪಿ ಇದರ ಜಂಟಿ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಅಜೆಕಾರು ಪದವಿಪೂರ್ವ ಕಾಲೇಜು ಪದ್ಮನಗರದ ಪ್ರಥಮ ಪಿಯುಸಿ ಪಿಸಿಎಂಸಿ ವಿಭಾಗದ ವಿದ್ಯಾರ್ಥಿ ಸ್ರುವಾಸ್ತ್ ಹೆಚ್. ಎನ್ ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಅಪ್ರತಿಮ ಕ್ರೀಡಾ ಸಾಧನೆ ತೋರಿದ ವಿದ್ಯಾರ್ಥಿ ಸ್ರುವಾಸ್ತ್. ಹೆಚ್. ಎನ್ ಅವರನ್ನು ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿ ಅವರು ಪ್ರೀತಿಪೂರ್ವಕವಾಗಿ ಅಭಿನಂದಿಸಿ, ಮುಂದಿನ ರಾಜ್ಯಮಟ್ಟದ ಪಂದ್ಯಾವಳಿಗೂ ಶುಭ ಹಾರೈಸಿ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
